ಬೇಸಿಗೆ ಬೆಟ್ಟವು ಶಿಮ್ಲಾ ರೈಲ್ವೆ ಮಾರ್ಗದಲ್ಲಿ ಬರುತ್ತದೆ. ಇದು ಸಮುದ್ರ ಮಟ್ಟದಿಂದ 1283 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಪ್ರವಾಸಿಗರು ಸುಂದರವಾದ ಪ್ರಕೃತಿಯ ನಡುವೆ ಒಂದು ನಡಿಗೆಯನ್ನು ಇಲ್ಲಿ ಕೈಗೊಳ್ಳಬಹುದು. ಮನೊರ್ವಿಲ್ಲೆ ಮಹಲ್ ಮತ್ತು ಹಿಮಾಚಲ್ ಪ್ರದೇಶ್ ವಿಶ್ವವಿದ್ಯಾನಿಲಯವು ಈ ಬೆಟ್ಟದ ಮೇಲೆ ನೆಲೆಗೊಂಡಿದೆ. ಪೈನ್ ಮತ್ತು ದೇವದಾರು ವೃಕ್ಷಗಳು ಈಸ್ಥಳದ ಸೊಬಗನ್ನು ಇಮ್ಮಡಿಗೊಳಿಸಿ ನೋಡುಗರ ಕಣ್ಮನವನ್ನು ತಣಿಸುತ್ತಿವೆ.