ಸ್ಕ್ಯಾಂಡಲ್ ಪಾಯಿಂಟ್, ಶಿಮ್ಲಾ

ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ಸ್ಕ್ಯಾಂಡಲ್ ಪಾಯಿಂಟ್

ಸ್ಕ್ಯಾಂಡಲ್ ಪಾಯಿಂಟ್ ರಿಡ್ಜ್ ಗೆ ಸಾಗುವ ಹಾದಿ ಮತ್ತು ಮಾಲ್ ರಸ್ತೆಯು ಕೂಡುವ ಸ್ಥಳದಲ್ಲಿ ನೆಲೆಗೊಂಡಿದೆ. ಪ್ರವಾಸಿಗರು ಇಲ್ಲಿ ಸ್ಕಾಟ್‍ಲ್ಯಾಂಡ್ ಚರ್ಚ್, ಹಳೆಯ ಆಲ್ಫಾ ರೆಸ್ಟೋರೆಂಟ್ ಮತ್ತು ಮಂತ್ರಮುಗ್ಧಗೊಳಿಸುವಂತಹ ಕಣಿವೆಯ ಸೊಬಗನ್ನು ನೋಡಿ ಸವಿಯಬಹುದು. ಈ ಸ್ಥಳಕ್ಕೆ ಇರುವ ವಿಚಿತ್ರ ಹೆಸರಿನ ಹಿಂದೆ ಒಂದು ಕಥೆಯಿದೆ. ಪ್ರಸಿದ್ಧ ಜನಪದ ಕಥೆಯ ಪ್ರಕಾರ ಪಟಿಯಾಲಾದ ರಾಜನು ಭಾರತದ ವೈಸ್‍ರಾಯ್‍ನ ಮಗಳ ಪ್ರೇಮಪಾಶದಲ್ಲಿ ಸಿಲುಕಿದನಂತೆ. ಅದಕ್ಕೆ ಅವನು ಆಕೆಯನ್ನು ಅಪಹರಿಸಿ ಕೊಂಡೊಯ್ದನಂತೆ. ಆಗ ಆಕೆ ಇಲ್ಲಿ ವಿಹಾರ ಮಾಡಿದಳೆಂದು ಹೇಳಲಾಗುತ್ತದೆ. ಸ್ಕ್ಯಾಂಡಲ್ ಪಾಯಿಂಟ್ ಮಾಲ್‍ನ ಅತ್ಯಂತ ಎತ್ತರದ ಸ್ಥಳವೆಂದು ಗುರುತಿಸಲ್ಪಡುತ್ತದೆ.

Please Wait while comments are loading...