ರಾಫ್ಟಿಂಗ್ ಹಿಮಾಚಲ್ ಪ್ರದೇಶಕ್ಕೆ ಭೇಟಿ ಕೊಡುವ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಚಟುವಟಿಕೆಯಾಗಿದೆ. ಇಲ್ಲಿ ನಾಲ್ಕು ನದಿಗಳಲ್ಲಿ ವೈಟ್ ವಾಟರ್ ರಾಫ್ಟಿಂಗ್‍ನ್ನು ಆನಂದಿಸಬಹುದು. ಬಿಯಾಸ್, ರಾವಿ, ಚೀನಬ್ ಮತ್ತು ಝೀಲಮ್ ನದಿಗಳು ಆ ನಾಲ್ಕು ನದಿಗಳಾಗಿವೆ. ರಾಜ್ಯದ ನೈಋತ್ಯ ಭಾಗದಲ್ಲಿ ಈ ನದಿಗಳು ಬಹುತೇಕ ಸಮಾನಾಂತರವಾಗಿ ಹರಿಯುತ್ತವೆ. ಈನದಿಗಳು ನೀರಿನ ಅದ್ಭುತವಾದ ಹರಿವಿನ ಪಾತ್ರವನ್ನು ರಾಫ್ಟರ್ ಗಳಿಗೆ ಒದಗಿಸುತ್ತವೆ. ಆದರು ಬಿಯಾಸ್ ನದಿ ಅತಿ ಹೆಚ್ಚು ಮನ್ನಣೆಯನ್ನು ಗಳಿಸಿದೆ. ಚಳಿಗಾಲದಲ್ಲಿ ಇಲ್ಲಿ ಅತಿ ಹೆಚ್ಚು ಹಿಮಪಾತವಾಗುತ್ತದೆ. ಅಲ್ಲದೆ ಮಳೆಗಾಲದಲ್ಲಿ ಸುರಿಯುವ ಭಾರೀ ಮಳೆಯು ಜಲಕ್ರೀಡೆಗೆ ಅವಕಾಶವನ್ನು ನೀಡುವುದಿಲ್ಲ. ಹಾಗಾಗಿ ಈ ಚಟುವಟಿಕೆಗೆ ಬೇಸಿಗೆಯು ಹೇಳಿ ಮಾಡಿಸಿದ ಸಮಯವಾಗಿದೆ.


Click it and Unblock the Notifications