ಕಾಳಿಬರಿ ದೇವಾಲಯವನ್ನು 1845ರಲ್ಲಿ ನಿರ್ಮಿಸಿದರು. ಇದು ಮಾಲ್ಗೆ ಸಮೀಪದಲ್ಲಿದೆ. ಈ ದೇವಾಲಯವು ಶ್ಯಾಮಲಾ ದೇವಿಗೆ ಸಮರ್ಪಿಸಲಾಗಿದೆ. ಈ ದೇವಿಯ ದೆಸಿಯಿಂದಾಗಿಯೆ ಶಿಮ್ಲಾಗೆ (ಶ್ಯಾಮಲಾ) ಈ ಹೆಸರು ಬಂದಿದೆ. ಈ ದೇವಿಯು ಕಾಳಿಯ ಅವತಾರವೆಂದು ಭಾವಿಸಲಾಗಿದೆ. ಈ ದೇವಾಲಯವು ದೇವಿಯ ಮರದ ವಿಗ್ರಹವನ್ನು ಹೊಂದಿದೆ. ದೀಪಾವಳಿ, ನವರಾತ್ರಿ ಮತ್ತು ದುರ್ಗಾ ಪೂಜೆಯ ಸಂದರ್ಭದಲ್ಲಿ ಇಲ್ಲಿಗೆ ಹಲವಾರು ಭಕ್ತರು ಭೇಟಿಕೊಡುತ್ತಾರೆ.