ಐಸ್ ಸ್ಕೇಟಿಂಗ್, ಶಿಮ್ಲಾ

ಐಸ್ ಸ್ಕೇಟಿಂಗ್ ಶಿಮ್ಲಾದ ಪ್ರಸಿದ್ಧ ಕ್ರೀಡೆಗಳಲ್ಲಿ ಒಂದಾಗಿದೆ. ಈ ಸುಂದರವಾದ ಪ್ರದೇಶವು ದೇಶದಲ್ಲಿಯೆ ಅತ್ಯಂತ ದೊಡ್ಡದಾದ ಐಸ್ ಸ್ಕೇಟಿಂಗ್ ರಿಂಕ್ ಅನ್ನು ಹೊಂದಿದೆ. ಸ್ಕೇಟಿಂಗ್ ಅನ್ನು ಆನಂದಿಸಲು ಡಿಸೆಂಬರ್ ನಿಂದ ಫೆಬ್ರವರಿಯವರೆಗಿನ ದಿನಗಳು ಅತ್ಯುತ್ತಮವಾಗಿರುತ್ತವೆ. ಆಗ ಇಲ್ಲಿನ ನೆಲವು ಪ್ರಾಕೃತಿಕ ಮಂಜುಗಡ್ಡೆಯಿಂದ ಆವೃತವಾಗಿರುತ್ತದೆ. ಶಿಮ್ಲಾ ಐಸ್ ಸ್ಕೇಟಿಂಗ್ ಕ್ಲಬ್ ಈಗಾಗಲೇ 75 ವರ್ಷಗಳನ್ನು ಪೂರೈಸಿದೆ.

ಈ ಕ್ಲಬ್ ಪ್ರವಾಸಿಗರಿಗೆ ಕಿರು ಅವಧಿ ಮತ್ತು ಒಂದು ಅವಧಿಯ ಸದಸ್ಯತ್ವವನ್ನು ನೀಡುತ್ತದೆ. ಪ್ರತಿದಿನವು ಬೆಳಗ್ಗೆ ಮತ್ತು ಸಂಜೆಯ ಅವಧಿಯಲ್ಲಿ ಇಲ್ಲಿ ಸ್ಕೇಟಿಂಗ್‍ಗೆ ಅವಕಾಶವನ್ನು ಒದಗಿಸಲಾಗುತ್ತದೆ. ಅದು ಇಲ್ಲಿ ಲಭ್ಯವಿರುವ ಮಂಜುಗಡ್ಡೆಯ ಮೇಲೆ ಅವಲಂಬಿಸಿರುತ್ತದೆ ಎಂಬುದನ್ನು ಮರೆಯಬಾರದು. ಮುನಿಸಿಪಾಲಿಟಿ ಕಟ್ಟಡವು ಒಂದು ಬಲೂನನ್ನು ಹಾರಿಸುತ್ತಿರುತ್ತದೆ. ಅದು ಪ್ರವಾಸಿಗರಿಗೆ ಮಂಜುಗಡ್ಡೆಯ ಲಭ್ಯ ಮತ್ತು ಅಲಭ್ಯತೆಯ ಸೂಚನೆಯನ್ನು ಒದಗಿಸುತ್ತಿರುತ್ತದೆ. ಚಳಿಗಾಲದಲ್ಲಿ ಶಿಮ್ಲಾದಲ್ಲಿ ಐಸ್ ಸ್ಕೇಟಿಂಗ್ ಉತ್ಸವವನ್ನು ನಡೆಸಲಾಗುತ್ತದೆ. ಆಗ ಇಲ್ಲಿ ಮೋಜು ಮಸ್ತಿ ಮತ್ತು ಆನಂದಕ್ಕೆ ಪಾರವೇ ಇರುವುದಿಲ್ಲ.

Please Wait while comments are loading...