ದುಶ್ಮೇಶ್ವರ್ ಮಹಾದೇವ್ ದೇವಾಲಯವು ಸವಾಯಿ ಮಾಧೊಪುರದ ಬಳಿಯಲ್ಲಿರುವ ಪ್ರಮುಖ ಧಾರ್ಮಿಕ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ದೇವಾಲಯವು ಇಲ್ಲಿಗೆ ಸಮೀಪದಲ್ಲಿರುವ ಸಣ್ಣ ಪಟ್ಟಣವಾದ ಸಿವಾಡ್ ನಲ್ಲಿರುವ ಪ್ರಸಿದ್ಧವಾದ ಹಾಗು ಸುಂದರವಾದ ಗುಡ್ಡದ ಮೇಲಿರುವ ಕೋಟೆಯಲ್ಲಿದೆ. ಸವಾಯಿ ಮಾಧೊಪುರದಿಂದ ಒಂದು ಗಂಟೆಯ ಪ್ರಯಾಣ ಮಾಡಿದರೆ ಸಿವಾಡಿನಲ್ಲಿರುವ ಪ್ರಸಿದ್ಧವಾದ ದುಶ್ಮೇಶ್ವರ್ ದೇವಾಲಯದ ಸುಂದರ ವಾಸ್ತುಶಿಲ್ಪವನ್ನು ಕಣ್ತುಂಬಿಕೊಳ್ಳಬಹುದು. ಶಿವನಿಗಾಗಿ ನಿರ್ಮಿಸಲಾಗಿರುವ ದೇವಾಲಯವು, ಇಲ್ಲಿನ ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದವನ್ನು ಪಡೆಯಲು ಬರುವ ಭಕ್ತಾಧಿಗಳನ್ನು ತನ್ನತ್ತ ಆಕರ್ಷಿಸುತ್ತಿರುತ್ತದೆ. ಸವಾಯಿ ಮಾಧೊಪುರದಿಂದ 40 ಕಿ.ಮೀ ದೂರದಲ್ಲಿರುವ ಸಿವಾಡಿಗೆ ಪ್ರವಾಸಿಗರು ಟ್ಯಾಕ್ಸಿ ಅಥವಾ ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದು.
ಇಲ್ಲಿಗೆ ಸಮೀಪದ ರೈಲು ನಿಲ್ದಾಣವು ಇಸರ್ಡದಲ್ಲಿದ್ದು, ಪಟ್ಟಣದಿಂದ 3 ಕಿ.ಮೀ ದೂರದಲ್ಲಿದೆ.


Click it and Unblock the Notifications