ಸಾಂಗ್ಲಾ ಮೆಡೋವ್ ಅಥವಾ ಸಾಂಗ್ಲಾ ಹುಲ್ಲುಗಾವಲು ಸುಂದರವಾದ ನೈಸರ್ಗಿಕ ತಾಣವಾಗಿದೆ. ಇಲ್ಲಿನ ಹಸಿರುಗಾವಲು ಹಾಗೂ ಇದರ ಹಿಂದಿರುವ ಹಿಮಾಲಯ ಪರ್ವತ ಶ್ರೇಣಿ ರಮಣೀಯ ಸ್ಥಳವಾಗಿದೆ. ಇಲ್ಲಿಂದ ವಿಹಂಗಮವಾಗಿ ಕಾಣಿಸುವ ಕಿನ್ನೌರ್ ಕೈಲಾಶ್ ಬೆಟ್ಟ ಹಾಗೂ ಸುತ್ತಲೂ ಚಾಚಿಕೊಂಡಿರುವ ಇಲ್ಲಿನ ಚಿಕ್ಕ ಪುಟ್ಟ ಗುಡಿಸಲುಗಳು ಒಟ್ಟಾರೆಯಾಗಿ ಈ ಪ್ರದೇಶದ ಸೌಂದರ್ಯಕ್ಕೆ ಮೆರಗು ತಂದಿದೆ. ಈ ಗುಡಿಸಲುಗಳು ಇಲ್ಲಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಸ್ಥಳೀಯರ ಇಂದಿನ ಜನಜೀವನದ ಚಿತ್ರಣವನ್ನು ನೀಡುತ್ತದೆ.


Click it and Unblock the Notifications