ಎಲ್ಲೈ ಪೆಡರಿ ಅಮ್ಮನ ದೇವಸ್ಥಾನವು ಸೇಲಂ ನಗರದ ಮರವನೇರಿಯ ಸರ್ಕಾರಿ ಕಲಾ ಮಾತ್ತು ವಿಜ್ಞಾನ ಕಾಲೇಜಿನ ಹತ್ತಿರದಲ್ಲಿದೆ. ಈ ದೇವಸ್ಥಾನ ರಸ್ತೆ ಪಕ್ಕದಲ್ಲಿಯೇ ಇದ್ದು ಈ ದೇವಸ್ಥಾನದ ಪ್ರಮುಖ ಘಟ್ಟ ಎಂದರೆ ಇಲ್ಲಿ ನಡೆಯುವ ದೇವಸ್ಥಾನದ ಹಬ್ಬ. ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಒಂದು ವಾರ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಭಕ್ತಾದಿಗಳು ಬೆಂಕಿ ಮೇಲೆ ನಡೆಯುವುದಕ್ಕೆ ಬೇರೆ ಯಾವುದೂ ಸಾಟಿಯಲ್ಲ. ಬೆಂಕಿಯನ್ನು ಹೂವು ಎಂದು ಪರಿಗಣಿಸಿ ಭಕ್ತರು ಇದರ ಮೇಲೆ ನಡೆಯುತ್ತಾರೆ.