ಬಿಸಿಲೆ ಘಾಟು ಸಕಲೇಶಪುರಕ್ಕೆ ಭೇಟಿಕೊಡುವ ಪ್ರತಿಯೊಬ್ಬರು ನೋಡಲೆಬೇಕಾದ ಪ್ರಮುಖ ಆಕರ್ಷಣೆಯಾಗಿದೆ. ಇದು ಬಿಸಿಲೆ ಮೀಸಲು ಅರಣ್ಯ , ಸಕಲೇಶಪುರ ಎಂದೆ ಪ್ರಸಿದ್ಧವಾಗಿದೆ. ಈ ಮಳೆಕಾಡು ಹುಲಿ, ಕಾಳಿಂಗ ಸರ್ಪ, ಕಡವೆ ಮತ್ತು ವಿವಿಧ ಪಕ್ಷಿ ಪ್ರಭೇದಗಳ ವಾಸ ತಾಣವಾಗಿದೆ. ಬಿಸಿಲೆ ಗುಡ್ಡ ಅಥವಾ ಬಿಸಿಲುಗುಡ್ಡವು ಬಿಸಿಲೆ ಘಾಟಿನ ಪ್ರಮುಖ ಆಕರ್ಷಣೆಯಾಗಿದ್ದು ಪ್ರಮುಖ ವಿಹಾರ ತಾಣವಾಗಿದೆ. ಪ್ರವಾಸಿಗರು ಇಲ್ಲಿಂದ ಪಶ್ಚಿಮ ಘಟ್ಟಗಳ, ಕುಮಾರ ಪರ್ವತ, ಪುಷ್ಪ ಗಿರಿ, ದೊಡ್ಡ ಬೆಟ್ಟ ಮತ್ತು ಪಟ್ಟ ಬೆಟ್ಟದಂತಹ ಇನ್ನಿತರ ಪರ್ವತ ಶ್ರೇಣಿಗಳ ಭವ್ಯ ನೋಟವನ್ನು ಕಾಣಬಹುದು. ಈ ಸ್ಥಳಕ್ಕೆ ಭೇಟಿ ಕೊಡಲು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳು ಉತ್ತಮ ಕಾಲವಾಗಿದೆ.


Click it and Unblock the Notifications