ಇಲ್ಲಿನ ಮೋಹೊ ನದಿಗೆ ಚಿಕ್ಕ ಆಣೆಕಟ್ಟೊಂದನ್ನು ನಿರ್ಮಿಸಲಾಗಿದ್ದು ಅದನ್ನು ಮೋಹೊ ಖುರ್ದ್ ಆಣೆಕಟ್ಟು ಎಂದು ಕರೆಯಲಾಗುತ್ತದೆ. ಇದನ್ನು ಸಜನ್‌ನ ನೀರಿನ ಅಗತ್ಯ ಪೂರೈಸುವ ನಿಟ್ಟಿನಲ್ಲಿ ನಿರ್ಮಿಸಲಾಗಿದೆ.
ಇದು ಪಲೂಸಾ ಜಲಪಾತಕ್ಕೆ ಅತ್ಯಂತ ಸಮೀಪದಲ್ಲಿದ್ದು, ಒಂದು ಬೃಹತ್ ಜಲಾಶಯ ನಿರ್ಮಿಸಿದೆ. ಸುತ್ತಲೂ ಹಸಿರು ಪರಿಸರ ನಿಮರ್ಮಾಣವಾಗಿದ್ದು, ಈ ಆಣೆಕಟ್ಟು ಪ್ರದೇಶ ಒಂದು ಉತ್ತಮ ಪಿಕ್‌ನಿಕ್ ತಾಣವಾಗಿ ರೂಪುಗೊಂಡಿದೆ. ಕುಟುಂಬ ಸಮೇತರಾಗಿ ಬರಲು ಇದು ಸೂಕ್ತ ತಾಣ.
ಈಜು ಹಾಗೂ ಬೋಟಿಂಗ್ ಹಾಗೂ ಇತರೆ ಜಲ ಸಾಹಸ ಮೆರೆಯಲು ಇದು ಸೂಕ್ತ ತಾಣವಾಗಿದೆ.


Click it and Unblock the Notifications