Search
  • Follow NativePlanet
Share
ಮುಖಪುಟ » ಸ್ಥಳಗಳು » ಸಹರಾನ್ಪುರ್ » ಆಕರ್ಷಣೆಗಳು » ಗುಗ್ಗಾ ವೀರ್ / ಗುಗ್ಗಾಲ್

ಗುಗ್ಗಾ ವೀರ್ / ಗುಗ್ಗಾಲ್, ಸಹರಾನ್ಪುರ್

1

ಗುಗ್ಗಾ ವೀರ್ ಗುಗ್ಗಲ್ ಅಥವಾ ಜಹಾರ್ ದೀವಾನ್ ಗುಗ್ಗಾ ಪೀರ್ ಎಂದೂ ಹೆಸರುವಾಸಿಯಾಗಿದ್ದು ಇದು ಸಹರಾನ್ಪುರದಿಂದ ಐದು ಕಿಲೋಮಿಟರ್ ದೂರದಲ್ಲಿದೆ. ನೌಗಾಜ ಪೀರ್ ನಂತೆ ಗುಗ್ಗಲ್ ಪೀರ್ ಕೂಡಾ ಭಾರೀ ಪ್ರವಾಸಿಗರನ್ನು ಆಕರ್ಷಿಸುತ್ತದೆ, ಇದರಲ್ಲಿ ಹಿಂದೂ ಮತ್ತು ಮುಸ್ಲಿಂರೂ ಸೇರಿದ್ದಾರೆ.

ಇತಿಹಾಸದ ಪ್ರಕಾರ, ಪಠಾಣ್ ರಾಜನಿಗೆ ಇಬ್ಬರು ಪುತ್ರಿಯರಿದ್ದರು ಅವರ ಹೆಸರು ವಾಚಾಲ್ ಮತ್ತು ಕಾಚಾಲ್. ಇಬ್ಬರ ಪಾಣಿಗ್ರಹಣವಾದ ನಂತರ ವಾಚಾಲ್ ತನಗೆ ಮಗುವಾಗಲೆಂದು ಗುರು ಗೋರಖ್ ನಾಥ್ ರನ್ನು ಪೂಜಿಸುತ್ತಾಳೆ. ಇದರಿಂದ ಪ್ರಸನ್ನರಾದ ಗುರುಗಳು ಆಕೆಯ ಇಷ್ಟಾರ್ಥವನ್ನು ಈಡೇರಿಸಲು ಆಶಿರ್ವದಿಸುತ್ತಿರುವ ಸಮಯದಲ್ಲಿ ಅಲ್ಲಿಗೆ ವಾಚಾಲ್‍ಳ ಸಹೋದರಿಯಾದ ಕಾಚಾಲ್ ಆಗಮಿಸುತ್ತಾಳೆ ಹಾಗು ಗುರುಗಳ ಆಶಿರ್ವಾದ ಪಡೆದು ತನ್ನ ಸಹೋದರಿಯು ಪಡೆಯಬೇಕಾಗಿದ್ದ ವರವನ್ನು ತಾನು ಅವಳಿ ಮಕ್ಕಳ ರೂಪದಲ್ಲಿ ಪಡೆಯುತ್ತಾಳೆ. ಇದನ್ನರಿತ ಗುರೂಜಿ ಮತ್ತೆ ವಾಚಾಲಳಿಗೆ ಗಂಡು ಮಗುವಾಗುವಂತೆ ಆಶೀರ್ವದಿಸುತ್ತಾ, ಗುಗ್ಗಲ್(ವಾಚಾಲ್‍ಳ ಮಗು) ಮುಂದೆ ಬೆಳೆದು ಸಹೋದರಿಯ ಮಕ್ಕಳನ್ನು ಕೊಲ್ಲುತ್ತಾನೆ ಎಂದು ಹೇಳುತ್ತಾರೆ. ಗುಗ್ಗಲ್ ಬೆಳೆದ ನಂತರ ಈ ವಿಷಯವನ್ನರಿತು ಗುರುಗಳು ಕೊಟ್ಟ ಹೇಳಿಕೆಯು ಘಟಿಸಬಾರದೆಂದು ಘೋರ ತಪಸ್ಸನ್ನಾಚರಿಸಿ ತನಗೆ ಬೇಕಾದನ್ನು ಪಡೆಯುತ್ತಾನೆ. ಎಲ್ಲಿ ಇವನು ತಪಸ್ಸನ್ನು ಆಚರಿಸುತ್ತಿದ್ದನೋ ಆ ಸ್ಥಳವು ಗುಗ್ಗಲ್ ವೀರ್ ಕಿ ಮಾರ್‍ಹಿ ಎಂದು ಹೆಸರು ವಾಸಿಯಾಯಿತು. ಈ ದಿನವನ್ನು ಇಂದಿಗೂ ಶುಕ್ಲ ಪಕ್ಷದ ದಶಮಿಯಂದು ಪ್ರತಿ ವರ್ಷ ಆಚರಿಸಲಾಗುತ್ತದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun