Search
  • Follow NativePlanet
Share
ಮುಖಪುಟ » ಸ್ಥಳಗಳು » ಸಹರಾನ್ಪುರ್ » ಹವಾಮಾನ

ಸಹರಾನ್ಪುರ್ ಹವಾಮಾನ

ಸಹರಾನ್ಪುರ್ ಭೇಟಿ ನೀಡಲು ನವೆಂಬರ್ ತಿಂಗಳಿನಿಂದ ಎಪ್ರಿಲ್ ತಿಂಗಳವರೆಗೆ ಸೂಕ್ತ, ಯಾಕೆಂದರೆ ಈ ಸಮಯದಲ್ಲಿ ವಾತಾವರಣ ತಂಪಾಗಿ ಮತ್ತು ಆಹ್ಲಾದಕರವಾಗಿರುತ್ತದೆ. ಅಥವಾ ಪ್ರವಾಸಿಗರು ಸುಡು ಬಿಸಿಲನ್ನು ತಡೆದುಕೊಳ್ಳುವ ಶಕ್ತಿಯಿದ್ದರೆ ಮೇ ಮತ್ತು ಜೂನ್ ತಿಂಗಳಲ್ಲೂ ಭೇಟಿ ನೀಡಬಹುದು. ಈ ಸಮಯದಲ್ಲಿ ಮಾವಿನ ಬೆಳೆ ಅತಿ ಹೆಚ್ಚಾಗಿರುತ್ತದೆ.

ಬೇಸಿಗೆಗಾಲ

ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಇಲ್ಲಿ ಬೇಸಿಗೆ ಇರುತ್ತದೆ ಮತ್ತು ಮೇ ತಿಂಗಳು ತೀವ್ರ ಬೇಸಿಗೆಯ ಕಾಲವಾಗಿರುತ್ತದೆ. ಈ ಸಮಯದಲ್ಲಿ ಉಷ್ಣಾಂಶ 45 ಡಿಗ್ರಿಯವರೆಗೆ ಸಾಗುತ್ತದೆ.

ಮಳೆಗಾಲ

ಮಳೆಗಾಲ ಜುಲೈ ತಿಂಗಳಿನಿಂದ ಸೆಪ್ಟಂಬರ್ ತಿಂಗಳವರೆಗಿರುತ್ತದೆ ಮತ್ತು ಈ ಸಮಯದಲ್ಲಿ ಅತಿಹೆಚ್ಚು ಮಳೆಯಾಗುತ್ತದೆ. ಈ ಸಮಯದಲ್ಲಿ ಆಕಾಶ ಮೋಡದಿಂದ ಕವಿದಿರುತ್ತದೆ ಮತ್ತು ಈ ಸಮಯದಲ್ಲಿ ವಾತಾವರಣ ತೇವದಿಂದ ಕೂಡಿರುತ್ತದೆ.

ಚಳಿಗಾಲ

ಡಿಸೆಂಬರ್ ತಿಂಗಳಿನಿಂದ ಫೆಬ್ರವರಿಯವರೆಗಿರುತ್ತದೆ. ಈ ಸಮಯದಲ್ಲಿ ವಾತಾವರಣ ತಂಪಾಗಿ ಮತ್ತು ಆಹ್ಲಾದಕರವಾಗಿರುತ್ತದೆ ಮತ್ತು ತಾಪಾಂಶ 12 ಡಿಗ್ರಿಯಿಂದ 20 ಡಿಗ್ರಿಯವರೆಗಿರುತ್ತದೆ.