ಆನಂದಪುರ ಸಾಹಿಬ್ ಹಿಮಾಲಯ ಪರ್ವತ ಶ್ರೇಣಿಯ ಕೆಳ ಭಾಗದಲ್ಲಿ ಉಪಸ್ಥಿತವಿದ್ದು, ಪರಮಾನಂದದ ಪವಿತ್ರ ನಗರವೆಂದು ಕರೆಯಲ್ಪಡುತ್ತದೆ. ಈ ನಗರವನ್ನು ನಿರ್ಮಿಸಿದ್ದು ಸಿಖರ ಒಂಭತ್ತನೇ ಗುರುವಾದ ಗುರು ತೇಗ ಬಹದ್ದೂರ್. ಇಲ್ಲಿಯ ಜನರ ನಂಬಿಕೆ ಪ್ರಕಾರ, ಬಿಲಾಸಪುರದ ದೊವಗರ ರಾಣಿ ಚಂಪಾ ಎಂಬುವವಳು ತನ್ನ ಗಂಡನಾದ ರಾಜಾ ದೀಪಚಂದನ ಶೋಕಾಚರಣೆಯಲ್ಲಿ ಗುರು ತೇಗ ಬಹದ್ದೂರ್ ಪಾಲ್ಗೊಂಡಿದ್ದಕ್ಕಾಗಿ, ಸಣ್ಣ ಭೂ ಭಾಗವನ್ನು ಗುರುವಿಗೆ ಕೊಟ್ಟಳು.
ಇದನ್ನು ಗುರು ತೇಗ ಬಹದ್ದೂರ್ ರವರು, ಮಖೋವಾಲ್ ಅವಶೇಷದ ಬಳಿ ಛಕ ನಾನಾಕಿ ಎಂಬ ಹಳ್ಳಿಯನ್ನಾಗಿ ನಿರ್ಮಿಸಿದರು. ನಂತರದ ದಿನಗಳಲ್ಲಿ ಆನಂದಪುರ ಸಾಹಿಬ್ ಆಗಿ ಜನಪ್ರಿಯಗೊಂಡಿತು. ಅನೇಕ ಪ್ರವಾಸಿಗರನ್ನು ಆಕರ್ಷಿಸುವ ಹೊಲ್ಲಾ ಮೊಹೊಲ್ಲಾ ಎಂಬ ವಾರ್ಷಿಕ ಹಬ್ಬವನ್ನು ಇಲ್ಲೇ ಆಚರಿಸಲಾಗುತ್ತದೆ.
ಈ ಸ್ಥಳವು ರೂಪನಗರದಿಂದ ಸುಮಾರು 41 ಕಿ.ಮಿ ದೂರದಲ್ಲಿದ್ದು ಸಿಖರ ಪವಿತ್ರ ಗುರುದ್ವಾರಗಳನ್ನು ಮತ್ತು ಕೋಟೆಗಳನ್ನು ಹೊಂದಿದೆ.


Click it and Unblock the Notifications