Search
  • Follow NativePlanet
Share
ಮುಖಪುಟ » ಸ್ಥಳಗಳು » ರೌರ್ಕೆಲಾ » ಆಕರ್ಷಣೆಗಳು » ವೇದವ್ಯಾಸ್

ವೇದವ್ಯಾಸ್, ರೌರ್ಕೆಲಾ

1

ವೇದವ್ಯಾಸ್ ಎಂಬ ಸ್ಥಳವು ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುತ್ತಿದೆ. ಈ ನಯನ ಮನೋಹರವಾದ ಸ್ಥಳವು ತೀರ್ಥವೆಂದು ಪರಿಗಣಿಸಲ್ಪಟ್ಟಿದೆ. ಇದು ನೆಲೆಗೊಂಡಿರುವ ಪ್ರದೇಶವು ತನ್ನದೇ ಆದ ಸೊಬಗಿನಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಇದು ಕೋಯೆಲ್, ಶಂಖ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ನೆಲೆಗೊಂಡಿದೆ. ಇದರಿಂದಾಗಿ  ಈ ಸ್ಥಳವನ್ನು ತ್ರಿಧಾರಾ ಸಂಗಮವೆಂದು ಸಹ ಕರೆಯುತ್ತಾರೆ. ಇದು ರೌರ್ಕೆಲಾದಿಂದ 9 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಸ್ಥಳವು ತನ್ನ ಐತಿಹಾಸಿಕ ಮಹತ್ವದಿಂದಾಗಿಯೂ ಸಹ ಖ್ಯಾತಿ ಪಡೆದಿದೆ.

ಗುರುಕುಲ ಮತ್ತು ವೇದಗಳ ಕಾಲದ ಆಶ್ರಮದ ಶಿಕ್ಷಣ ವ್ಯವಸ್ಥೆಯು ಇಲ್ಲಿನ ಜನಪ್ರಿಯ ಸಂಗತಿಯಾಗಿದೆ. ದಂತ ಕತೆಗಳ ಪ್ರಕಾರ ಮಹಾ ಸಂತ ಮಹರ್ಷಿ ವ್ಯಾಸರು ಮಹಾಭಾರತವನ್ನು ಇದೇ ಸ್ಥಳದಲ್ಲಿ ರಚಿಸಿದರು ಎಂದು ತಿಳಿದು ಬರುತ್ತದೆ. ಈ ಸಂಗತಿಯು ಈ ಸ್ಥಳಕ್ಕೆ ಮತ್ತಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಇಲ್ಲಿಗೆ ಭೇಟಿ ನೀಡಿದಾಗ ಪ್ರವಾಸಿಗರು ವ್ಯಾಸ ಗುಹೆಗಳನ್ನು ಸಹ ಸುತ್ತಿ ನೋಡಬಹುದು. ಇಲ್ಲಿನ ಪ್ರವಾಸವನ್ನು ದೋಣಿಗಳ ಮೂಲಕ ಆಯೋಜನೆ ಮಾಡಲಾಗುತ್ತದೆ. ಈ ಸ್ಥಳಕ್ಕೆ ವರ್ಷದ ಯಾವುದೇ ಸಮಯದಲ್ಲಿ ಬೇಕಾದರು ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed