ನೆಹರು ವನ ಉದ್ಯಾನವು ತುಂಬಾ ಆಕರ್ಷಕವಾಗಿದ್ದು, ರೋಯಿಂಗ್ ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಸುಂದರವಾದ ಆರ್ಕಿಡಗಳು, ಕಾಕ್ಟಸ ಗಿಡಗಳನ್ನು ಹೊಂದಿದ್ದು, ಉದ್ಯಾನವನವನ್ನು ಶ್ರೀಮಂತಗೊಳಿಸಿವೆ. ಇದು ದೀಯೊಪನಿ ನದಿಯ ತೀರದ ಮೇಲೆ ನೆಲೆಗೊಂಡಿದ್ದು ರೋಯಿಂಗ್ ನಿಂದ ಕೆಲವೇ ಕೀಲೊ ಮೀಟರ ದೂರದಲ್ಲಿದೆ. ಇದು ಪ್ರವಾಸಿಗರಿಗೆ ಅತ್ಯಂತ ಪ್ರಶಸ್ತವಾದ ವಿಹಾರ ತಾಣವಾಗಿದೆ. ಇಲ್ಲಿಯ ಸುಂದರ ಪರಿಸರದ ಹೊರತಾಗಿಯೂ ಪ್ರವಾಸಿಗರು ದಿಯೋಪಾನಿ ನದಿಯ ವಿಹಂಗಮ ನೋಟವನ್ನು ಇಲ್ಲಿಗೆ ಸಮೀಪವಿರುವ ಈಜೆ- ಬ್ರಿಜ ಗೋಪುರದ ಮೂಲಕ ನೋಡಬಹುದು. ಇದು ಅತಿಥಿ ಗೃಹದ ಸೌಲಭ್ಯವನ್ನು ಸಹ ಹೊಂದಿದೆ. ಗೋಪುರದ ಹೊರತಾಗಿಯೂ ಈಜೆ ನದಿಯು ಈಮೆ ನದಿಯೊಂದಿಗೆ ಸಮಾಗಮವಾದ ಸ್ಥಳವು ಇಲ್ಲಿರುವ ಇನ್ನೊಂದು ಪ್ರಮುಖ ಸ್ಥಳವಾಗಿದೆ.


Click it and Unblock the Notifications