Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಯಿಂಗ್ » ಆಕರ್ಷಣೆಗಳು » ಈಫಿಪಾನಿ

ಈಫಿಪಾನಿ, ರೋಯಿಂಗ್

0

ಇದು ಅರುಣಾಚಲ ಪ್ರದೇಶ ರಾಜ್ಯದ ದಿಬಾಂಗ ಕಣಿವೆ ಜಿಲ್ಲೆಯಲ್ಲಿದ್ದು ಜನಪ್ರಿಯ ವಿಹಾರ ತಾಣವಾಗಿದ್ದು ಆಕರ್ಷಕ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. ಇದು ರೋಯಿಂಗ್  ನಗರದಿಂದ 10 ಕೀಲೊ ಮೀಟರ ದೂರದಲ್ಲಿರುವ ದಿಬಾಂಗ ನದಿಯ ಬಯಲು ಕಣಿವೆಯಿಂದ  ಇದು ನಿರ್ಮಾಣವಾಗಿದೆ. ಪ್ರವಾಸಿಗರು ಇಲ್ಲಿ ವಿಹಾರವನ್ನು ಮಾಡಿ ಆನಂದಿಸಬಹುದು. ಇಲ್ಲಿಯ ಆಕರ್ಷಕ ಕಣಿವೆಯ ನೋಟ ಮತ್ತು ನದಿಯು ದೇಶಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಪ್ರವಾಸಿಗರು ಇಲ್ಲಿ ಮನೆಯಿಂದ ತಂದ ಊಟವನ್ನು ಅಥವಾ ಇಲ್ಲಿರುವ ಹೋಟೆಲುಗಳಿಂದ ತಂದ ಆಹಾರವನ್ನು ನದಿಯ ತೀರದ ಮೇಲೆ ಕುಳಿತು ತಿಂದು ಸಂತೋಷವನ್ನು ಪಡಬಹುದು. ಇದು ಪ್ರಕೃತಿ ಪ್ರಿಯರ ನೆಚ್ಚಿನ ಕೇಂದ್ರವಾಗಿದೆ. ಪ್ರಕೃತಿ ಸೌಂದರ್ಯವನ್ನು ಸವಿಯುವುದರ ಜೊತೆಗೆ ಇಲ್ಲಿ ಇಂಪಾದ ಸಂಗೀತವನ್ನು ಕೇಳಬಹುದು. ಈ ಸುಂದರ ಪ್ರದೇಶದಲ್ಲಿ ಹರಿಯುತ್ತಿರುವ ನದಿಯ ಶಬ್ದವು ನಮ್ಮನ್ನು ಜನ ಜಂಗುಳಿಯ ಈ ಪಟ್ಟಣದ ಈ ಶಬ್ದದಿಂದ ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ಸಾಕಷ್ಟು ಪ್ರಮಾಣದಲ್ಲಿ ಹಬ್ಬಿರುವ ಹಸಿರು ಇಲ್ಲಿಯ ಆಹ್ಲಾದಕರ ವಾತಾವರಣ ಮತ್ತು ತಂಪಾದ ಗಾಳಿಗೆ ಕಾರಣವಾಗಿದ್ದು ಈಫಿಪಾನಿಯನ್ನು ಇನ್ನಷ್ಟು ಅಕರ್ಷಣೆಯನ್ನಾಗಿ ಮಾಡಿದೆ.

ಇಲ್ಲಿಗೆ ವಿಹಾರಕ್ಕಾಗಿ ಭೇಟಿ ನೀಡುವ ಪ್ರವಾಸಿಗರು ತಮ್ಮೊಂದಿಗೆ ಕೆಲವು ಆಟದ ಉಪಕರಣಗಳನ್ನು ತಂದರೆ ತಮ್ಮ ಈ ವಿಹಾರವನ್ನು ಇನ್ನಷ್ಟು ಆನಂದಿಸಬಹುದು. ಮೀನುಗಾರಿಕೆಗೆ ಇಲ್ಲಿ ಅವಕಾಶವಾಗಿದ್ದು, ಪ್ರವಾಸಿಗರು ಗಾಳ ಹಾಕಿ ಮೀನು ಹಿಡಿಯುವುದನ್ನು ಮಾಡಬಹುದು. ಛಾಯಾ ಚಿತ್ರವನ್ನು ತೆಗೆಯುವ ಹವ್ಯಾಸ ಇರುವ ಪ್ರವಾಸಿಗರಿಗೆ ಇದು ಹೇಳಿ ಮಾಡಿಸಿದ ತಾಣವಾಗಿದ್ದು, ಇಲ್ಲಿ ಅನೇಕ ಸುಂದರ ಪ್ರಾಕೃತಿಕ ಛಾಯಾ ಚಿತ್ರಗಳನ್ನು ತೆಗೆಯಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed