ಕ್ಯುಝಿಂಗ್ ಗ್ರಾಮವು ಸಿಕ್ಕಿಂನಲ್ಲಿ ಗ್ರಾಮ ಪ್ರವಾಸೋದ್ಯಮವನ್ನು ಪೋಷಿಸುತ್ತಿರುವ ಅತ್ಯಂತ ಪ್ರಮುಖ ಗ್ರಾಮವಾಗಿದೆ. ಈ ಗ್ರಾಮವು ರಾವಂಗ್ಲಾದಿಂದ 8 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಸಿಕ್ಕಿಂನ ಗ್ರಾಮೀಣ ಜೀವನ ಶೈಲಿಯನ್ನು ಅರಿತುಕೊಳ್ಳಲು ಹಾಗು ಸಿಕ್ಕಿಂ ಜನರ ಆತಿಥ್ಯದ ಸವಿ ತಿಳಿಯಲು ನೀವು ಈ ಗ್ರಾಮಕ್ಕೆ ಭೇಟಿ ನೀಡಬೇಕು. ಸ್ಥಳೀಯ ಸಿಕ್ಕಿಂ ಭಾಷೆಯಾದ ಭುಟಿಯಾದಲ್ಲಿ ಕ್ಯುಝಿಂಗ್ ಎಂದರೆ " ಗೋಧಿ ಗದ್ದೆಗಳ ನಾಡು" ಎಂದರ್ಥ. ಇದು ಸಮುದ್ರ ಮಟ್ಟದಿಂದ 1700 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ.
ಇಲ್ಲಿ ನೆಲೆಗೊಂಡಿರುವ ಬೊನ್ ಮಠವು ತನ್ನ ನಂಬಿಕೆ ಮತ್ತು ಶ್ರದ್ಧೆಗಾಗಿ ಹೆಸರುವಾಸಿಯಾಗಿದೆ. ಇದು ಸಿಕ್ಕಿಂನ ಜನರ ಧಾರ್ಮಿಕ ನಂಬಿಕೆ ಮತ್ತು ಸಂಪ್ರದಾಯಗಳನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ.


Click it and Unblock the Notifications