Search
  • Follow NativePlanet
Share
ಮುಖಪುಟ » ಸ್ಥಳಗಳು » ರಾವಂಗ್ಲಾ » ಹವಾಮಾನ

ರಾವಂಗ್ಲಾ ಹವಾಮಾನ

ರಾವಂಗ್ಲಾದಲ್ಲಿ ಹವಾಮಾನವು ಚಳಿಗಾಲದಲ್ಲಿ ಹೊರತುಪಡಿಸಿ ವರ್ಷಪೂರ್ತಿ ಆಹ್ಲಾದಕರವಾಗಿರುತ್ತದೆ. ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶವು ಅಸಹನೀಯವೆನಿಸುವಷ್ಟು ಕುಸಿದಿರುತ್ತದೆ. ಇಲ್ಲಿಗೆ ಭೇಟಿ ಕೊಡಲು ಬೇಸಿಗೆ ಕಾಲವು ಅತ್ಯಂತ ಸೂಕ್ತವಾದ ಸಮಯವಾಗಿದೆ.

ಬೇಸಿಗೆಗಾಲ

ಇಲ್ಲಿ ಬೇಸಿಗೆಯು ಮಾರ್ಚ್ ನಲ್ಲಿ ಆರಂಭವಾಗಿ ಮೇವರೆಗು ಇರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು ಗರಿಷ್ಠ 28° ಸೆಲ್ಶಿಯಸ್‍ನಿಂದ ಕನಿಷ್ಠ 10° ಸೆಲ್ಶಿಯಸ್‍ವರೆಗೆ ಇರುತ್ತದೆ. ನೀವೇನಾದರು ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ನೀಡಲು ಬಯಸಿದಾದಲ್ಲಿ ತೆಳ್ಳಗಿನ ಚಳಿಗಾಲದ ಉಡುಪುಗಳನ್ನು ಒಯ್ಯುವುದು ಉತ್ತಮ. ಏಕೆಂದರೆ ಇಲ್ಲಿ ಈ ಅವಧಿಯಲ್ಲಿ ರಾತ್ರಿಗಳು ಚಳಿಯಿಂದ ಕೂಡಿರುತ್ತವೆ. ಹೀಗಿದ್ದರು ಸಹ ಈ ಅವಧಿಯು ರಾವಂಗ್ಲಾಗೆ ಭೇಟಿ ನೀಡಲು ಹೇಳಿ ಮಾಡಿಸಿದ ಸಮಯವಾಗಿದೆ.

ಮಳೆಗಾಲ

ರಾವಂಗ್ಲಾದಲ್ಲಿ ಮಳೆಗಾಲವು ಜೂನ್‍ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿ ಸಾಧಾರಣವಾದ ಮಳೆ ಬೀಳುತ್ತದೆ. ಒಮ್ಮೊಮ್ಮೆ ಮಳೆಯು ಅಕ್ಟೋಬರ್ ವರೆಗು ಬೀಳುತ್ತ ಇರುತ್ತದೆ. ಹಾಗಾಗಿ ನವೆಂಬರ್ ನಲ್ಲಿ  ಇಲ್ಲಿಗೆ ಭೇಟಿ ನೀಡುವುದು ಉತ್ತಮ.

ಚಳಿಗಾಲ

ರಾವಂಗ್ಲಾದಲ್ಲಿ ಡಿಸೆಂಬರ್ ತಿಂಗಳಿನಲ್ಲಿ  ಚಳಿಗಾಲವು ಪ್ರಾರಂಭವಾಗುತ್ತದೆ. ಈ ಋತುವು ಫೆಬ್ರವರಿಯವರೆಗೆ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು -5° ಸೆಲ್ಶಿಯಸ್‍ವರೆಗು ಕುಸಿಯುವ ಸಂಭವವಿರುತ್ತದೆ. ಅಲ್ಲದೆ ಗರಿಷ್ಠ ಉಷ್ಣಾಂಶವು  16° ಸೆಲ್ಶಿಯಸ್ ದಾಟುವುದಿಲ್ಲ. ರಾವಂಗ್ಲಾಗೆ ಭೇಟಿ ನೀಡಲು ಬಯಸುವವರು ಈ ಅವಧಿಯಲ್ಲಿ ಭೇಟಿ ನೀಡುವುದು ಉತ್ತಮ.