ಬೊರೊಂಗ್ ಮತ್ತು ರಲೊಂಗ್ ಬಿಸಿ ನೀರಿನ ಬುಗ್ಗೆಗಳು ಸರಿ ಸುಮಾರು 7 ಕಿ.ಮೀ ದೂರಗಳಲ್ಲಿ ನೆಲೆಗೊಂಡಿವೆ. ಈ ಎರಡೂ ಬಿಸಿನೀರಿನ ಬುಗ್ಗೆಗಳು ತಮ್ಮಲ್ಲಿರುವ ಔಷಧೀಯ ಗುಣಗಳಿಂದ ಅತ್ಯಂತ ಜನಪ್ರಿಯಗೊಂಡಿವೆ. ಇಲ್ಲಿಗೆ ಭೇಟಿ ನೀಡುವವರಿಗೆ ತಾತ್ಕಾಲಿಕವಾದ ಕುಟೀರಗಳು ಬಾಡಿಗೆಗೆ ದೊರೆಯುತ್ತವೆ. ಆದರೆ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವುದಾದಲ್ಲಿ ತಮ್ಮ ಅಗತ್ಯಕ್ಕೆ ಬೇಕಾದ ಬೆಚ್ಚಗಿನ ಉಡುಪುಗಳನ್ನು, ಹಾಸಿಗೆ, ಹೊದಿಕೆ ಮತ್ತು ಅವಶ್ಯಕ ಪರಿಕರಗಳನ್ನು ತರುವುದು ಉತ್ತಮ.


Click it and Unblock the Notifications