ರತ್ನಾಗಿರಿಗೆ ಸಮೀಪದಲ್ಲೆ ಇರುವ ಗಣೇಶಗುಲೆ ಸಮುದ್ರ ತೀರವು ಪ್ರಶಾಂತತೆ ಹಾಗೂ ಜಲ ಕ್ರೀಡೆಗೆ ಹೆಸರುವಾಸಿಯಾದ ತಾಣ. ಪ್ರಕೃತಿಯ ಸೌಂದರ್ಯ ಆರಾಧಿಸುವವರ ಪಟ್ಟಿಯಲ್ಲಿ ಇದು ಪ್ರಖ್ಯಾತ ಸಮುದ್ರ ತೀರ. ರತ್ನಾಗಿರಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿದ್ದು ಸೂರ್ಯಾಸ್ತಮಾನದಲ್ಲಿ ಅತ್ಯಂತ ಅಮೋಘವಾದ ಪ್ರಾಕೃತಿಕ ಸೌಂದರ್ಯವನ್ನು ನೋಡುಗರಿಗೆ ಉಣಬಡಿಸುತ್ತದೆ.
ಸಮುದ್ರ ತೀರದಲ್ಲಿರುವ ಮರಳು ಸಣ್ಣ ಕಲ್ಲುಗಳ ಮಿಶ್ರಣವಾಗಿರುವುದರಿಂದ ಈ ತೀರದ ನೀರು ಬಹಳ ಶುದ್ಧವಾಗಿದ್ದು ನೀರಿನ ತಳಭಾಗವನ್ನೂ ಕಾಣಬಹುದು. ಸಮುದ್ರ ತೀರದಲ್ಲಿ ನಿಮ್ಮ ಸಂಗಾತಿ ಜೊತೆ ಹಾಗೆ ನಾಲ್ಕು ಹೆಜ್ಜೆ ತಿರುಗಾಡಿಕೊಂಡು ಬರಲು ಚೆನ್ನಾಗಿರುತ್ತದೆ. ಬದುಕಿನ ಜಂಜಾಟದ ನಡುವೆ ಇಲ್ಲಿಗೆ ಒಮ್ಮೆ ಬಂದು ಹಾಯಾಗಿ ಕಾಲ ಕಳೆಯಲು ಹಿತವಾಗಿರುತ್ತದೆ.


Click it and Unblock the Notifications