ಉಪತ್ ಒಂದು ಪ್ರಸಿದ್ಧವಾದ ಪ್ರವಾಸಿ ತಾಣ ಮತ್ತು ಸುಂದರವಾದ ನಗರವಾಗಿದೆ. ರಾನಿಖೇತ್ ನಗರದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಈ ಪಟ್ಟಣ ಹಿಮಾಲಯದ ಸುಂದರ ದೃಶ್ಯಾವಳಿಗಳನ್ನು ಪ್ರವಾಸಿಗರಿಗೆ ತೋರಿಸುತ್ತದೆ. ಇಲ್ಲಿಯೇ ಪಕ್ಕದಲ್ಲಿರುವ 9 ಹೋಲ್ ಗಳಿರುವ ಗಾಲ್ಫ್ ಆಟದ ಮೈದಾನ ಕ್ರೀಡಾಸಕ್ತರಿಗೆ ನೆಚ್ಚಿನ ಸ್ಥಳವಾಗಿದೆ. ಇದು ಭಾರತದಲ್ಲೇ ಒಂದು ಉತ್ತಮವಾದ್ ಗಾಲ್ಫ್ ಆಟದ ಅಂಗಣ ಅನ್ನಿಸಿಕೊಂಡಿದೆ. ಅಲ್ಮೋರಾದ ರಸ್ತೆಯ ಮೇಲಿರುವ ಈ ಪಟ್ಟಣ ತನ್ನ ಸುತ್ತಲೂ ಇರುವ ಹಚ್ಚ ಹಸಿರಿನಿಂದ ಮತ್ತಷ್ಟು ಸುಂದರವಾಗಿ ಕಾಣಿಸುತ್ತದೆ.
ಕಾಳಿಕಾ ಪಟ್ಟಣ ಇಲ್ಲಿಂದ ಕೇವಲ ಒಂದು ಕಿಲೋಮಿಟರ್ ದೂರದಲ್ಲಿದೆ. ಇದು ಇಲ್ಲಿನ ಕಾಳಿ ದೇವಾಲಯಕ್ಕೆ ಪ್ರಸಿದ್ಧವಾಗಿದೆ. ದೇವಸ್ಥಾನವಲ್ಲದೆ ಇಲ್ಲಿರುವ ನರ್ಸರಿ ಕೂಡ ಹೆಸರುವಾಸಿಯಾಗಿದೆ.


Click it and Unblock the Notifications