Search
  • Follow NativePlanet
Share
ಮುಖಪುಟ » ಸ್ಥಳಗಳು » ರಾನಿಖೇತ್ » ಆಕರ್ಷಣೆಗಳು » ದ್ವಾರಹತ್

ದ್ವಾರಹತ್, ರಾನಿಖೇತ್

1

ಐತಿಹಾಸಿಕ ಮತ್ತು ಪುರಾತತ್ವ ವಿಚಾರಗಳನ್ನು ಗಮನಿಸಿದರೆ ರಾನಿಖೇತ್ ನ ದ್ವಾರಹತ್ ಒಂದು ಅತ್ಯಂತ ಪ್ರಮುಖವಾದ ಪ್ರವಾಸಿ ತಾಣವಾಗಿದೆ. ರಾನಿಖೇತ್ ನಿಂದ 35 ಕಿ.ಮೀ ದೂರವಿರುವ ಈ ಸ್ಥಳದಲ್ಲಿ ಐತಿಹಾಸಿಕ ಮಹತ್ವ ಇರುವ 55 ದೇವಾಲಯಗಳಿವೆ. ಶಕ್ತಿ ದೇವಾಲಯ, ನೈತ್ನಾ ದೇವಿ ದೇವಸ್ಥಾನ, ಬದ್ರಿನಾಥ್ ದೇವಾಲಯ, ಮನಿಯಾನ್ ದೇವಸ್ಥಾನ, ಮ್ರುತ್ಯುಂಜಯ ದೇವಸ್ಥಾನ ಮತ್ತು ಧ್ವಜ ದೇವಾಲಯ ಇಲ್ಲಿನ ಕೆಲವು ಪ್ರಮುಖ ದೇವಾಲಯಗಳು. ಒಂದು ನಂಬಿಕೆಯ ಪ್ರಕಾರ, ಅಪುರೂಪದ ಸಂಜೀವಿನಿ ಗಿಡ ಮೂಲಿಕೆಯು ಇಲ್ಲಿನ ಶಕ್ತಿ ದೇವಾಲಯದ ಒಳಗೆ ಬೆಳೆಯುತ್ತದೆ.

ರಾಮಗಂಗಾ ನದಿಯ ತಟದಲ್ಲಿರುವ ಅತ್ಯದ್ಭುತವಾದ ದೃಶ್ಯಾವಳಿಗಳಿಂದ ಆವೃತವಾದ ಈ ಪ್ರದೇಶ ನೋಡಲು ಬಹಳ ಸುಂದರವಾಗಿದೆ. ಇದು ಕತ್ಯೂರಿ ರಾಜವಂಶದವರ ರಾಜಧಾನಿಯಾಗಿತ್ತು. ಇದು 16 ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ಕತ್ಯುರಿ ರಾಜವಂಶದ ಶಕ್ತಿಸ್ಥಳವೂ ಆಗಿತ್ತು. ವಾರ್ಷಿಕವಾಗಿ ಸ್ಯಾಲ್ದೇ-ಬಿಖೌತಿ ಎಂಬ ಉತ್ಸವವನ್ನು ಏಪ್ರಿಲ್ ನಲ್ಲಿ ಆಯೋಜಿಸಲಾಗುತ್ತಿದ್ದು ಇದು ಸ್ಥಳೀಯರ ಅತ್ಯಂತ ಇಷ್ಟವಾದ ಮತ್ತು ವಿಜೃಂಭಣೆಯಿಂದ ಆಚರಿಸುವ ಉತ್ಸವವಾಗಿದೆ. ಮಕರ ಸಂಕ್ರಾಂತಿ, ಬಸಂತ ಪಂಚಮಿ, ಒಲ್ಗಿಯಾ, ಖತರುವಾ, ವಟ ಸಾವಿತ್ರಿ ಮತ್ತು ಗಂಗಾ ದಸರಾ ಹಬ್ಬಗಳನ್ನೂ ಕೂಡ ಇಲ್ಲಿ ಆಚರಿಸಲಾಗುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed