ಝಿಯಾರತ್ ಸೈನ್ ಗಂಜಿ ಸಾಹಿಬ್ ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ. ಇದು ರಾಜೌರಿ ನಗರದಿಂದ ಸುಮಾರು 10 ಕಿ.ಮೀ ದೂರದಲ್ಲಿದೆ. ಇದು ದರ್ಹಾಲ್ ನಾಲಾದ ಎದುರಾಭಿಮುಖವಾಗಿ ನೆಲೆಸಿದೆ. ಹೆಸರು ಸುಚಿಸುವಂತೆ ಇಲ್ಲಿ ಸೈನ್ ಗಂಜಿ ಸಾಹಿಬ್ ಅವರನ್ನು ಪೂಜಿಸಲಾಗುತ್ತದೆ. ಇವರು ಫತೇಪುರದಲ್ಲಿರುವ ಗುಜ್ಜರ್ ಕುಟುಂಬಕ್ಕೆ ಸೇರಿದವರಾಗಿದ್ದರು. ಸೈನ್ ಗಂಜಿ ಅವರು ಈ ಭೂಮಿಯನ್ನು ಮಾನವ ಜನಾಂಗದ ಬದುಕಿಗೆ ಇನ್ನಷ್ಟು ಉತ್ತಮವನ್ನಾಗಿಸಿದ ಹಿರಿಮೆಯನ್ನು ಗಳಿಸಿದ್ದಾರೆ. ಝಿಯಾರತ್ ಸೈನ್ ಗಂಜಿ ಸಾಹಿಬ್ ಕ್ಷೇತ್ರವು ಅಕ್ಟೋಬರ್ ಮೊದಲ ವಾರದಲ್ಲಿ ಜನರಿಂದ ತುಂಬಿರುತ್ತದೆ, ಇಲ್ಲಿ ಆ ಅವಧಿಯಲ್ಲಿ ವರ್ಷಂಪ್ರತಿ ಉರುಸ್ ನಡೆಯುತ್ತಿರುತ್ತದೆ.


Click it and Unblock the Notifications