ಶ್ರೀ ಬಾಲಾ ತ್ರಿಪುರಸುಂದರಿ ದೇವಾಲಯ ರಾಜಮಂಡ್ರಿಯ ಪ್ರಮುಖ ಧಾರ್ಮಿಕ ಯಾತ್ರಾಕೇಂದ್ರವಾಗಿದೆ. ಗೋದಾವರಿ ನದಿ ತೀರಲ್ಲಿರುವ ಈ ದೇವಾಲಯವನ್ನು ದಕ್ಷಿಣಕಾಶಿ ಎಂದೆ ಬಣ್ಣಿಸಲಾಗಿದೆ. ಸುಮಾರು ಇನ್ನೂರು ವರ್ಷಗಳ ಹಿಂದೆ ವಿಶ್ವೇಶ್ವರ ಇಲ್ಲಿ ಪ್ರತ್ಯಕ್ಷವಾಗಿದ್ದ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಬೇರೆ ಬೇರೆ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ಬಂದು ಪ್ರಾರ್ಥನೆ ಮಾಡಿಕೊಂಡರೆ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆಯಿದೆ. ಇಲ್ಲಿ ನಡೆಯುವ ಉತ್ಸವಗಳು, ಹಬ್ಬಗಳಿಗೆ ವಿಶೇಷವಾದ ಮಹತ್ವಗಳಿದ್ದು ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ವರ್ಷದ ಯಾವುದೇ ದಿನಗಳಲ್ಲಿ ಇಲ್ಲಿಗೆ ಆಗಮಿಸಬಹುದಾಗಿದೆ.


Click it and Unblock the Notifications