ರಾಜಮಂಡ್ರಿಯ ಪ್ರಮುಖ ಆಕರ್ಷಣೆಗಳಲ್ಲಿ ಗೋದಾವರಿ ನದಿ ತೀರದಲ್ಲಿರುವ ಪುಷ್ಕರ್‌ಘಾಟ್ ಕೂಡ ಒಂದು. ಇದು ಸ್ನಾನಕ್ಕಾಗಿ ನದಿತಟದಲ್ಲಿ ನಿರ್ಮಿಸಿರುವ ಘಾಟ್ ಆಗಿದೆ. ಇದು ರಾಜಮಂಡ್ರಿಯ ಪ್ರಮುಖ ಸ್ನಾನ ಘಟ್ಟವಾಗಿದೆ. ಸಮೀಪದಲ್ಲಿಯೇ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಮಾರ್ಕಾಂಡೇಯ ಸ್ವಾಮಿ ದೇವಸ್ಥಾನ ಸೇರಿದಂತೆ ಹಲವಾರು ಪ್ರಾಚೀನ ದೇವಾಲಯಗಳು ಸುತ್ತುವರೆದಿದೆ. ಭಕ್ತಾದಿಗಳು ವರ್ಷಪೂರ್ತಿ ಘಾಟ್ ಗೆ ಆಗಮಿಸುತ್ತಿರುವುದರಿಂದ ಯಾವಾಗಲೂ ಇಲ್ಲಿ ಜನಸಂದಣಿ ಇರುತ್ತದೆ. ಇಲ್ಲಿ ಸ್ನಾನ ಮಾಡಿದರೆ ಪಾಪಗಳೆಲ್ಲಾ ನಾಶವಾಗುತ್ತದೆ ಎಂದು ನಂಬಲಾಗಿದೆ. ಸಮೀಪದಲ್ಲಿಯೇ ದೇವಾಲಯಗಳೂ ಇರುವುದರಿಂದ ಭಕ್ತರ ಮನಸ್ಸಿನಲ್ಲಿ ಧಾರ್ಮಿಕ ಭಾವನೆ ಮೂಡುತ್ತದೆ.


Click it and Unblock the Notifications