ರಾಜಮಂಡ್ರಿಯ ವ್ಯಾಪಾರಿ ಕೇಂದ್ರಗಳಲ್ಲಿ ಅತಿ ಪ್ರಮುಖವಾದದ್ದು ಪಾಲ್ ಚೌಕ್. ವಂದೇಮಾತರಂ ಚಳುವಳಿಯ ಸಂದರ್ಭದಲ್ಲಿ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಬಿಪೀನ್ ಚಂದ್ರಪಾಲ್ ಇಲ್ಲಿಗೆ ಭೇಟಿ ನೀಡಿದ್ದರು. ಹಾಗಾಗಿ ಅವರ ಹೆಸರನ್ನೇ ಈ ಪ್ರದೇಶಕ್ಕಿಡಲಾಗಿದೆ. ಪಾಲ್ ಚೌಕ್ ನಲ್ಲಿ ನೀವು ನೋಡಲೇಬೇಕಾದ ಅನೇಕ ಪ್ರಮುಖ ಹೆಗ್ಗುರುತುಗಳು ಇವೆ. ಮೂರು ಉದ್ಯಾನವನಗಳಿವೆ. ಜೆಟ್ಟಿ ಟವರ್ಸ್, ಬಸ್ ನಿಲ್ದಾಣ ಎಲ್ಲವೂ ನೀವು ನೋಡಬೇಕಾದದ್ದೇ. ನಗರದ ಗದ್ದಲದ ನಡುವೆ ಪಾಲ್ ಚೌಕ್ ಬೀದಿಗಳಲ್ಲಿ ನಡೆಯುತ್ತಿದ್ದರೆ ಅನೇಕ ಸಂಸ್ಕೃತಿಯ ಸಂಗತಿಗಳು ಮುಖಾಮುಖಿಯಾಗುತ್ತದೆ. ಜನಜೀವನ ಕಣ್ಮುಂದೆ ತೆರೆದುಕೊಳ್ಳುತ್ತದೆ. ಇತಿಹಾಸದ ಒಂದೊಂದು ಘಟನೆಯನ್ನೂ ನೆನಪಿಸಿಕೊಡುವ ಶಕ್ತಿ ಪಾಲ್‌ಚೌಕ್‌ಗೆ ಇದೆ. ರಾಜಮಂಡ್ರಿಗೆ ಬಂದಾಗ ನೀವೊಮ್ಮೆ ಇಲ್ಲಿಗೆ ಭೇಟಿ ನೀಡಬಹುದು.


Click it and Unblock the Notifications