ರಾಜಮಂಡ್ರಿ ನಗರದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿ ಒಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪಟ್ಟಿಸೀಮಾ. ಇಲ್ಲಿನ ಎರಡು ದೇವಾಲಯಗಳು ಬಹು ಪ್ರಸಿದ್ಧಿಯನ್ನು ಪಡೆದಿದ್ದು, ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಭಾರತೀಯ ಚಲನಚಿತ್ರ ತಯಾರಕರಿಗಂತೂ ಈ ಸ್ಥಳವೆಂದರೆ ಅಚ್ಚುಮೆಚ್ಚು. ಗೋದಾವರಿ ನದಿ ಮಧ್ಯೆ ಇರುವ ದ್ವೀಪದಲ್ಲಿ ಕಟ್ಟಲಾದ ಶ್ರೀ ವೀರಭದ್ರ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ರಾಜಲಾಂಛನ ಮತ್ತು ಆಯುಧವನ್ನು ಹಿಡಿದಿರುವ ಭದ್ರಕಾಳಿಯ ಬೃಹತ್ ವಿಗ್ರಹ ಇಲ್ಲಿನ ಮತ್ತೊಂದು ಆಕರ್ಷಣೆ. ಇಲ್ಲಿನ ಇನ್ನೊಂದು ದೇವಸ್ಥಾನವೆಂದರೆ ಶ್ರೀ ಭವನನಾರಾಯಣ ಸ್ವಾಮಿ ದೇವಾಲಯ. ಪ್ರತಿ ನಿತ್ಯವೂ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ.


Click it and Unblock the Notifications