Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜಮಂಡ್ರಿ » ಆಕರ್ಷಣೆಗಳು » ಡಮೆರ್ಲ ರಾಮರಾವ್ ಆರ್ಟ್ ಗ್ಯಾಲರಿ

ಡಮೆರ್ಲ ರಾಮರಾವ್ ಆರ್ಟ್ ಗ್ಯಾಲರಿ, ರಾಜಮಂಡ್ರಿ

1

ರಾಜಮಂಡ್ರಿಯಲ್ಲಿ ಹುಟ್ಟಿ ಬೆಳೆದ ಒಬ್ಬ ಅತ್ಯಪರೂಪದ ಕಲಾವಿದ ಡಮೆರ್ಲ ರಾಮರಾವ್‌. ಅವರ ನೆನಪಿಗಾಗಿ ಡಮೆರ್ಲ ರಾಮ ರಾವ್ ಕಲಾ ಗ್ಯಾಲರಿಯನ್ನು  ಸ್ಥಾಪಿಸಲಾಯಿತು. ಅವರು ರಚಿಸಿದ ಅತ್ಯುತ್ತಮ ಕಲಾಕೃತಿಗಳ ಪ್ರದರ್ಶನ ಇಂದು ಅವರು ಕಾಲವಾಗಿ 92 ವರ್ಷಗಳ ನಂತರವೂ ನಡೆಯುತ್ತಿದೆ. ಆಂಧ್ರ ಕಲಾ ಶೈಲಿಯನ್ನು ಪುನರುಜ್ಜೀವನಗೊಳಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಇವರ ಕಾಲದಲ್ಲಿ ಚಿತ್ರಕಲಾ ಪ್ರಪಂಚದಲ್ಲಿ ದೊಡ್ಡ ಕ್ರಾಂತಿಯೇ ನಡೆಯಿತು. ಹೊಸ ಹೊಸ ಮಾದರಿಗಳನ್ನು ಹುಡುಕಿದರು. ವರ್ಣಚಿತ್ರಕಲೆಯಲ್ಲಿ ಅನೇಕ ಹೊಸ ಪ್ರಯೋಗಗಳಿಗೆ ನಾಮ ಹಾಡಿದರು. ನೂರಾರು ಕಲಾಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಇದೆಲ್ಲವುಗಳ ಪರಿಣಾಮವಾಗಿ ಹೊಸ ಕಲಾಶೈಲಿಯ ಉಗಮವಾಯಿತು. ಇದೆಲ್ಲವುಗಳ ನೆನಪು ಈ ಕಲಾಗ್ಯಾಲರಿಯಲ್ಲಿ ಇನ್ನೂ ಜೀವಂತವಾಗಿದೆ. ಇದೇ ಕಾರಣಕ್ಕೆ ಅವರ ನೆನಪಿನಲ್ಲಿ ರಾಮರಾವ್ ಕಲಾ ಗ್ಯಾಲರಿಯ ಸ್ಥಾಪನೆಯೂ ಆಯಿತು. ಇದೇ ದಿಶೆಯಲ್ಲಿ ರಾಜಮಂಡ್ರಿ ಚಿತ್ರಕಲಾಶಾಲೆಯೂ ಪ್ರಾರಂಭವಾಯಿತು. ಚಿತ್ರಕಲೆಯ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿ ಮೂಡಿಸಲು ಈ ಕಲಾಗ್ಯಾಲರಿಗಳು ಮಹತ್ವದ ಮಾತ್ರ ನಿರ್ವಹಿಸುತ್ತಿವೆ. ಕಲೆಯ ಸಲುವಾಗಿಯೇ ಜೀವನವನ್ನು ಮುಡುಪಾಗಿಟ್ಟ ಡಮೆರ್ಲ ರಾಮ್ ರಾವ್‌ ಅವರ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಅವರಿಗೆ ಗೌರವ ಸೂಚಿಸಲಾಗುತ್ತದೆ. ಶುಕ್ರವಾರ ಮತ್ತು ಖಾಸಗಿ ರಜಾದಿನಗಳನ್ನು ಹೊರತಾಗಿಸಿ ಮತ್ತೆಲ್ಲಾ ದಿನಗಳಲ್ಲೂ ಬೆಳಿಗ್ಗೆ 10.30 ರಿಂದ ಸಂಜೆ 5 ಗಂಟೆಯವರೆಗೆ ಇದು ತೆರೆದಿರುತ್ತದೆ.

One Way
Return
From (Departure City)
To (Destination City)
Depart On
26 Apr,Sun
Return On
27 Apr,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Sun
Check Out
27 Apr,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Sun
Return On
27 Apr,Mon