ಪಿಕ್‌ನಿಕ್ ನಡೆಸಲು ಒಂದು ಉತ್ತಮ ಸ್ಥಳದ ಹುಡುಕಾಟದಲ್ಲಿ ನೀವಿದ್ದರೆ, ಆಲ್ಕಾಟ್ ಉದ್ಯಾನ ನಿಮ್ಮನ್ನು ಕೈಬೀಸಿ ಕರೆಯುತ್ತದೆ. ದಿವ್ಯಜ್ಞಾನ ಸಮಾಜದ ಮುಖ್ಯಸ್ಥ ಆಲ್ಕಾಟ್ ಹೆಸರಿನಲ್ಲಿ ಈ ಉದ್ಯಾನವನ್ನು ಕರೆಯಲಾಗುತ್ತದೆ. ಸಾರ್ವಜನಿಕರಿಗೆ ವಿರಾಮಕ್ಕೆ ಇದು ಹೇಳಿ ಮಾಡಿಸಿದಂಥ ಸ್ಥಳ. ದಿವ್ಯಜ್ಞಾನ ಸಮಾಜದ ಸಾಮಾನ್ಯ ಸಭೆಗಳು ಇದೆ ಸ್ಥಳದಲ್ಲಿ ನಡೆಯುತ್ತವೆ. ಅನ್ನಿಬೆಸೆಂಟ್ ಸ್ಥಾಪಿಸಿರುವ ಈ ಸಮಾಜದ ಉದ್ಘಾಟನೆ ನಡದದ್ದು ಕೂಡ ಇಲ್ಲಿಯೇ. ಬಳಿಕ ಎರಡು ಬಾರಿ ಈ ಪ್ರದೇಶವನ್ನು ಪುನರುಜ್ಜೀವನ ಮಾಡಲಾಯಿತು. ಅಲ್ಕಾಟ್ ಅವರ ಚಿಂತನೆಯನ್ನು ಪಸರಿಸುವ ಉದ್ದೇಶದಿಂದ ಈ ಉದ್ಯಾನಕ್ಕೆ ಅವರ ನಾಮಕರಣ ಮಾಡಲಾಗಿದೆ. ಅನೇಕ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿದ್ದ ಇವರು ಸಮಾಜದ ಏಳ್ಗೆಗಾಗಿ ಹೊಸ ಚಿಂತನೆಗಳನ್ನು ಬಿತ್ತಿದರು. ಕಾಟನ್‌ಪೇಟೆಯ ಮೂಲಕ ಇನ್ನೆಸ್‌ಪೇಟಾವನ್ನು ಸಂಪರ್ಕಿಸುವ ಮಾರ್ಗದ ಮಧ್ಯದಲ್ಲಿ ಈ ಪ್ರದೇಶವನ್ನು ಕಾಣಬಹುದಾಗಿದೆ.


Click it and Unblock the Notifications