ಪುರಿ ಕೊನಾರ್ಕ್ ಮರಿನ್ ಡ್ರೈವ್ ಪವಿತ್ರ ಕ್ಷೇತ್ರಗಳಾದ ಪುರಿ ಮತ್ತು ಕೊನಾರ್ಕ್ ನ್ನು ಸಂಪರ್ಕಿಸುವ 35 ಕಿ.ಮೀ.ಗಳ ರಸ್ತೆ. ರಸ್ತೆಯ ಎರಡು ಬದಿಗಳಲ್ಲಿ ಕರಾವಳಿಯ ಕಾಡುಗಳನ್ನು ಬೆಳೆಸಲಾಗಿದೆ. ಪುರಿ ಕೊನಾರ್ಕ್ ಮರಿನ್ ಡ್ರೈವ್ ನಲ್ಲಿ ಹಲವಾರು ಬೀಚ್ ರೆಸಾರ್ಟ್ ಗಳಿವೆ. ದಾರಿ ಮಧ್ಯೆ ನೀವು ರಾಮಚಂಡಿ ಮಂದಿರ, ಪಂಚಮುಖಿ ಹನುಮಾನ್ ಮಂದಿರ ಮತ್ತು ಗುಪ್ತೇಶ್ವರ ಮಂದಿರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಬಹುದು.
ಇಲ್ಲಿರುವ ಪ್ರಮುಖ ಪ್ರವಾಸಿ ತಾಣ ಚಂದ್ರಭಾಗ ಬೀಚ್ ನಲ್ಲಿ ಮೊದಲೇ ಬುಕ್ಕಿಂಗ್ ಮಾಡಿದರೆ ಬೋಟಿಂಗ್ ಸೌಲಭ್ಯ ಲಭ್ಯವಿದೆ. ಪುರಿ-ಕೊನಾರ್ಕ್ ರಾಮಚಂದಿ ಬೀಚ್ ಭಾರೀ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿಯೂ ಬೋಟಿಂಗ್ ಸೌಲಭ್ಯ ಲಭ್ಯವಿದೆ. ಇಲ್ಲಿ ಸುರ್ಯೋದಯ ಮತ್ತು ಸುರ್ಯಾಸ್ತದ ಸೌಂದರ್ಯವನ್ನು ತಪ್ಪಿಸಿಕೊಳ್ಳಬಾರದು.


Click it and Unblock the Notifications