ಜಗನ್ನಾಥ ಮಂದಿರದಿಂದ 3 ಕಿ.ಮೀ. ದೂರದಲ್ಲಿರುವ ಚಕ್ರತೀರ್ಥ ಮಂದಿರ ಪುರಿಯ ವಾಯುವ್ಯ ಭಾಗದ ತುದಿಯಲ್ಲಿದೆ. ಇದನ್ನು ಚಕ್ರನಾರಾಯಣ ಮಂದಿರ, ಚಕ್ರ ನರಸಿಂಹ ಮಂದಿರ ಮತ್ತು ಚಕ್ರ ನೃಸಿಂಗ ಮಂದಿರವೆಂದೂ ಕರೆಯಲಾಗುತ್ತದೆ. ಇದು ಜಗನ್ನಾಥ ದೇವರ ಪವಿತ್ರ ಆಯುಧವಾಗಿದ್ದು, ಕಪ್ಪು ಗ್ರಾನೈಟ್ ನಿಂದ ಕೆತ್ತಲಾಗಿರುವ ದೊಡ್ಡ ಚಕ್ರವು ನೀರಿನಲ್ಲಿದೆ ಮತ್ತು ಮಧ್ಯಭಾಗದಲ್ಲಿ ನಾರಾಯಣ ದೇವರ ಮೂರ್ತಿ ಚಕ್ರನಾರಾಯಣವಿದೆ.
ಹಲವಾರು ವರ್ಷಗಳ ಮೊದಲು ಪುರಿಗೆ ಬಡಿದ ಚಂಡಮಾರುತದ ವೇಳೆ ಜಗನ್ನಾಥ ಮಂದಿರದ ಮೇಲಿದ್ದ ಚಕ್ರವು ಹಾರಿಹೋಗಿ ಚಕ್ರತೀರ್ಥದಲ್ಲಿ ಬಿದ್ದಿದೆ ಎಂದು ನಂಬಲಾಗಿದೆ. ಜಗನ್ನಾಥ ಮಂದಿರದಲ್ಲಿ ದೇವತೆಗಳ ಮೂರ್ತಿಯನ್ನು ಕೆತ್ತನೆ ಮಾಡಲು ಸಮುದ್ರ ಮೂಲಕ ತರಲಾಗುತ್ತಿದ್ದ ದಾರು ಎನ್ನುವ ಮರದ ತುಂಡುಗಳು ಚಕ್ರತೀರ್ಥದಲ್ಲಿ ಮೊದಲ ಸಲ ಭೂಮಿಯನ್ನು ಸ್ಪರ್ಶಿಸಿತಂತೆ.