ಪುಣೆಯಲ್ಲಿನ ಜನಪ್ರಿಯ ಪ್ರವಾಸಿ ತಾಣ ಸರಸ್ ಬಾಗ್. ನಾನಾಸಾಹೇಬ್ ಪೇಶ್ವಾರಿಂದ ಇದು ನಿರ್ಮಾಣವಾಯಿತು. ಪಾರ್ವತಿ ಬೆಟ್ಟದ ಸಮೀಪ ನಿರ್ಮಾಣವಾಗಿರುವ ಸುಂದರ ಮತ್ತು ವೈಭವಯುತವಾದ ಉದ್ಯಾನವನವಿದು.
ಈ ಪಾರ್ಕ್‌ನಲ್ಲಿ ಗಣಪತಿ ದೇಗುಲ ಕೂಡಾ ಇದೆ. ಮಾಧವ ರಾವ್ ಪೇಷ್ವಾರಿಂದ ಇದು 1774ರಲ್ಲಿ ಅಂದರೆ ಸುಮಾರು 220 ವರ್ಷಗಳ ಹಿಂದೆ ನಿರ್ಮಾಣಗೊಂಡಿದೆ.
ಸ್ವರ್ಗೇಟ್‌ನಿಂದ ಒಂದು ಕಿ.ಮೀ ದೂರದಲ್ಲಿರುವ ಇದು, ನಮ್ಮ ದಿನನಿತ್ಯದ ಜಂಜಾಟಗಳನ್ನು ಮರೆತು, ಸಂಜೆಯನ್ನು ಕಳೆಯಲು ಮತ್ತು ಗಾಳಿವಿಹಾರಕ್ಕೆ ಪ್ರಶಸ್ತ ಸ್ಥಳ. ಇಲ್ಲಿ ಜಾಗರ್ಸ್ ಟ್ರ್ಯಾಕ್ ಕೂಡಾ ಇದೆ.


Click it and Unblock the Notifications