ಚೌಪಾಟಿ (Chowpati) ಎಂದು ಜನಪ್ರಿಯವಾಗಿ ಕರೆಯಲ್ಪಡುವ ಪೋರಬಂದರ್ ಬೀಚ್, ನಗರದ ಮತ್ತೊಂದು ಪ್ರಸಿದ್ಧ ಪ್ರವಾಸೀ ತಾಣವಾಗಿದೆ. ಇಸವಿ 2003 ರಲ್ಲಿ ಪುನರ್ನಿರ್ಮಾಣಗೊoಡ ಈ ಸ್ಥಳವು, ಸಂದರ್ಶಕರು ಆರಾಮವಾಗಿ ಕುಳಿತು, ಆಯಾಸ ಪರಿಹರಿಸಿಕೊಳ್ಳಲು ಬೇಕಾದ ಅತ್ಯುತ್ತಮ ಆಸನ ವ್ಯವಸ್ಥೆಯನ್ನು ಹೊಂದಿದೆ. ಮಕ್ಕಳಿಗಾಗಿ ಇಲ್ಲೊಂದು ಸ್ಕೇಟಿಂಗ್ ರಿಂಕ್ ಕೂಡ ಇದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೇಳವೂ ಸಹ ಚೌಪಾತಿ ಚೌಪಾಟಿಯ ಪರಿಸರದಲ್ಲಿ ಪ್ರತೀ ವರ್ಷವೂ ಕೂಡ ಆಯೋಜಿಸಲ್ಪಡುತ್ತದೆ.


Click it and Unblock the Notifications