Search
  • Follow NativePlanet
Share
ಮುಖಪುಟ » ಸ್ಥಳಗಳು » ಪೋರಬಂದರ್ » ಆಕರ್ಷಣೆಗಳು » ಬರ್ಡಾ ಬೆಟ್ಟಗಳ ವನ್ಯಜೀವಿ ಅಭಯಾರಣ್ಯ

ಬರ್ಡಾ ಬೆಟ್ಟಗಳ ವನ್ಯಜೀವಿ ಅಭಯಾರಣ್ಯ, ಪೋರಬಂದರ್

2

ಈ ಅತ್ಯಾಕರ್ಷಕ, ರೋಮಾಂಚಕವಾದ ವನ್ಯಜೀವಿ ಅಭಯಾರಣ್ಯವು ಪೋರಬಂದರ್ ಮತ್ತು ಜಾಮ್ನಗರ್ (Jamnagar), ಈ ಎರಡು ಜಿಲ್ಲೆಗಳ ನಡುವೆ ಹಂಚಲ್ಪಟ್ಟಿದೆ.  ಆದಾಗ್ಯೂ, ಈ ಅಭಯಾರಣ್ಯವು ಪೋರಬಂದರ್ ನಿಂದ ಕೇವಲ 15 ಕಿ.ಮೀ. ದುರದಲ್ಲಿರುವುದರಿಂದ, ಇದು  ಜಾಮ್ನಗರ್ ಜಿಲ್ಲೆಗಿಂತಲೂ, ಪೋರಬಂದರ್ ಜಿಲ್ಲೆಗೆ ಹೆಚ್ಚು ಸಮೀಪದಲ್ಲಿದೆ.  ಈ ಪ್ರದೇಶವು ಒಂದು ಕಾದಿರಿಸಲ್ಪಟ್ಟ ಅರಣ್ಯವಾಗಿದ್ದು, ಇದು 1979 ರಲ್ಲಿ ಅಭಯಾರಣ್ಯವಾಗಿ ಗುರುತಿಸಲ್ಪಟ್ಟಿತ್ತು.  

ಈ ಪ್ರದೇಶವು ಬೆಟ್ಟದಂತಹ ಕಡಿದಾದ ದಾರಿಗಳು, ಸಮತಟ್ಟಾದ ಬಯಲು ಪ್ರದೇಶಗಳು ಮತ್ತು ಆಕರ್ಷಣೀಯವಾದ ನೀರಿನ ಸಣ್ಣ ತೊರೆಗಳಿಂದ ಮನೋಹರವಾಗಿ ಆವೃತಗೊಂಡಿದೆ.   ಮಾತ್ರವಲ್ಲದೇ, ಈ ಒಟ್ಟಾರೆ ಪ್ರದೇಶವು ಸುಂದರವಾದ ಹಸಿರಾದ ವನಗಳು ಮತ್ತು ಕೃಷಿ (ಸಾಗುವಳಿ) ಭೂಮಿಗಳಿಂದ ಸುತ್ತುವರೆಯಲ್ಪಟ್ಟಿದೆ.

ಈ ಪ್ರದೇಶವು ಅರಬ್ಬೀ ಸಮುದ್ರ ತೀರದಿಂದ 15 ಕಿ. ಮೀ. ದೂರದಲ್ಲಿದ್ದು, ಇಲ್ಲಿರುವ ಈ ಅಭಯಾರಣ್ಯವು ಈ ಪ್ರದೇಶಕ್ಕೆ ಉಪ್ಪು ನೀರಿನ ಒರತೆಯಾಗದಂತೆ ಗುರಾಣಿಯಂತೆ ರಕ್ಷಣೆಯನ್ನು ನೀಡುತ್ತದೆ.  ಈ ರಕ್ಷಿತಾರಣ್ಯದ ತನ್ನ ಪ್ರಾಣಿಸಂಕುಲದ ಭಾಗವಾಗಿ  ತೋಳ, ಚಿರತೆ, ಮೊಸಳೆಗಳು, ಊಸರವಳ್ಳಿಗಳು, ವಿಷಪೂರಿತ ಸರ್ಪಗಳು, ನೆತ್ತಿಯ ಮೇಲೆ ಜುಟ್ಟನ್ನು ಹೊಂದಿರುವ ರಣಹದ್ದು (crested hawk eagle ), ಮತ್ತು ಚುಕ್ಕೆಗಳುಳ್ಳ ರಣಹದ್ದುಗಳನ್ನೊಳಗೊಂಡ, ಅಳಿವಿನಂಚಿನಲ್ಲಿರುವ ಪ್ರಾಣಿಗಳು, ಪಕ್ಷಿಗಳು, ಮತ್ತು ಸರೀಸೃಪಗಳನ್ನು ಒಳಗೊಂಡಿದೆ.  

ಈ ಅಭಯಾರಣ್ಯವು 192.31 ಚ. ಕಿ. ಮೀ. ವಿಸ್ತಾರವಾಗಿದ್ದಾಗ್ಯೂ, ಇಲ್ಲಿ ಕೇವಲ ಪ್ರಾಣಿಗಳು ಮಾತ್ರವಲ್ಲದೇ, ವ್ಯಾಪಕ ವೈವಿಧ್ಯತೆಯುಳ್ಳ ಸಸ್ಯಸಂಕುಲ ಮತ್ತು ಔಷದೀಯ ಸಸ್ಯಗಳನ್ನೂ ಸಹ ಒಳಗೊಂಡಿದೆ.  ಇಲ್ಲಿನ ಮತ್ತೊಂದು ಆಕರ್ಷಣೆಯೆಂದರೆ, ಈ ಅಭಯಾರಣ್ಯದ ಮೂಲಕ ಹರಿಯುವ ಬಿಲೇಶ್ವರಿ ಮತ್ತು ಜೋಘ್ರಿ ನದಿಗಳು.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu