Search
  • Follow NativePlanet
Share
ಮುಖಪುಟ » ಸ್ಥಳಗಳು » ಪೋರಬಂದರ್ » ಹವಾಮಾನ

ಪೋರಬಂದರ್ ಹವಾಮಾನ

ಪೋರಬಂದರ್ ನ ಹವಾಗುಣವು ಬದಲಾಗುತ್ತಲೇ ಇರುತ್ತದೆ.  ಬೇಸಿಗೆಗಳು ಅತ್ಯಂತ ತೇವವಾಗಿದ್ದು, ಮಳೆಗಾಲದಲ್ಲಿ ಮಳೆಯು ಅನಿರೀಕ್ಷಿತವಾಗಿರುತ್ತವೆ.  ಈ ಅವಧಿಯಲ್ಲಿ ಮಳೆಯು ಕೆಲವೊಮ್ಮೆ ಬಿರುಸಾಗಿಯೂ, ಇನ್ನು ಕೆಲವೊಮ್ಮೆ ಹದವಾಗಿಯೂ ಇರುತ್ತದೆ.

ಬೇಸಿಗೆಗಾಲ

ಪೋರಬಂದರ್ ನಲ್ಲಿ ಬೇಸಿಗೆಯು ವಿಪರೀತ ಬಿಸಿಯಾಗಿರುತ್ತದೆ.   ಬೇಸಿಗೆಯ ತಿಂಗಳುಗಳು ಇಲ್ಲಿ ಮಾರ್ಚ್ ತಿಂಗಳಿನಿಂದ ಮೊದಲ್ಗೊಂಡು, ಮೇ, ಜೂನ್ ತಿಂಗಳುಗಳವರೆಗೂ ಮುಂದುವರೆಯುತ್ತದೆ.  ಈ ಅವಧಿಯಲ್ಲಿ ಉಷ್ಣತೆಯು 44 ಡಿಗ್ರಿ ಸೆಲ್ಷಿಯಸ್ ನಷ್ಟು ಏರಿಕೆಯನ್ನು ಕಾಣಬಹುದು.  ಉಷ್ಣತೆಯು ಸಾಮಾನ್ಯವಾಗಿ ಈ ಅವಧಿಯಲ್ಲಿ 40 ಡಿಗ್ರಿ ಸೆಲ್ಷಿಯಸ್ ನಿಂದ 23 ಡಿಗ್ರಿ ಸೆಲ್ಷಿಯಸ್ ನವರೆಗೆ ವ್ಯತ್ಯಾಸಗೊಳ್ಳುತ್ತದೆ.

ಮಳೆಗಾಲ

ಜುಲೈ, ಆಗಸ್ಟ್, ಮತ್ತು ಸೆಪ್ಟೆಂಬರ್ ತಿಂಗಳುಗಳು ಪೋರಬಂದರ್ ನಲ್ಲಿ ಮಳೆಗಾಲದ ತಿಂಗಳುಗಳಾಗಿದ್ದು, ಈ ಅವಧಿಯಲ್ಲಿ ಮಳೆಯು ಸಂಪೂರ್ಣ ಅನಿಶ್ಚಿತವಾಗಿರುತ್ತದೆ. ಕೆಲವು ವರ್ಷಗಳಲ್ಲಿ ಇದು ಅತ್ಯಧಿಕವಾಗಿರಬಹುದು ಮತ್ತು ಇತರ ಕೆಲವು ವರ್ಷಗಳಲ್ಲಿ ಇದು  ಬಹಳಷ್ಟು ಕಡಿಮೆಯಾಗಿರಬಹುದು.

ಚಳಿಗಾಲ

ಪೋರಬಂದರ್ ನಲ್ಲಿ ಚಳಿಗಾಲವು ಅಕ್ಟೋಬರ್ ನಲ್ಲಿ ಆರಂಭಗೊಂಡು ಜನವರಿ ಯವರೆಗೆ ಮುಂದುವರೆಯುತ್ತದೆ.  ಈ ಅವಧಿಯಲ್ಲಿ ಉಷ್ಣತೆಯು 10 ಡಿಗ್ರಿ ಸೆಲ್ಷಿಯಸ್ ನಿಂದ 36 ಡಿಗ್ರಿ ಸೆಲ್ಷಿಯಸ್ ನವರೆಗೆ ಬದಲಾಗಬಹುದು.  ಈ ಅವಧಿಯು ಪ್ರಕೃತಿ ವೈಭವವನ್ನು ಆಸ್ವಾದಿಸಲು ಸುಸಮಯವಾಗಿದ್ದು, ಇಲ್ಲಿಗೆ ಭೇಟಿ ನೀಡಲು ಅತೀ ಪ್ರಶಸ್ತ ಸಮಯವಾಗಿದೆ.