ಉಡುಮಲೈಪೇಟ್ ಪೊಲ್ಲಾಚಿಯಿಂದ 24 ಕಿ.ಮೀ ದೂರದಲ್ಲಿದೆ. ಇದು ಪೊಲ್ಲಾಚಿಯ ಅವಳಿ ನಗರ. ದೇವಸ್ಥಾನಗಳು, ನಿಸರ್ಗ ಸೌಂದರ್ಯ ಮತ್ತು ಡ್ಯಾಂಗಳಿಂದಾಗಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಇದು ಮಾರ್ಪಟ್ಟೀದೆ. ಪ್ರಸನ್ನ ವಿನಾಯಕ ದೇವಸ್ಥಾನ, ಮಾರಿಯಮ್ಮನ್ ದೇವಸ್ಥಾನ, ಕಾಮಾಚಿ ಅಮ್ಮನ್ ಮಂದಿರ, ಬಜನೈ ಮೂರ್ತಿ ದೇವಸ್ಥಾನ ಮುಂತಾದವುಗಳು ಇಲ್ಲಿ ಕಂಡುಬರುವ ಪ್ರಸಿದ್ದ ದೇವಸ್ಥಾನಗಳು. ತಿರುಮೂರ್ತಿ ಡ್ಯಾಂ, ಅಮರಾವತಿ ಡ್ಯಾಂ, ಕಾದಂಬರಿ ಡ್ಯಾಂಗಳಿಗಾಗಿಯೂ ಇದು ಪ್ರಸಿದ್ದ. ಅಮರಾವತಿ ಡ್ಯಾಂನಿಂದ ಕೊಡೈಕೆನಾಲ್ ಗೆ ಚಾರಣಿಗರು ಸಾಹಸ ಟ್ರೆಕ್ಕಿಂಗ್ ಮಾಡಬಹುದು.


Click it and Unblock the Notifications