16ನೇ ಶತಮಾನದಲ್ಲಿ ಕಟ್ಟಲಾದ ಅಲಗುನಾಚಿ ಅಮ್ಮನ್ ದೇವಸ್ಥಾನ ಪೊಲ್ಲಾಚಿಯಿಂದ 80 ಕಿ.ಮೀ ದೂರದಲ್ಲಿದೆ. ವಲ್ಲಿಯಾರಾಚಲ್ ನ ಕೆಲ ಜನರಿಂದ ಈ ದೇವಸ್ಥಾನ ನಿರ್ಮಾಣವಾಗಿದೆ. ಈ ದೇವಸ್ಥಾನದ ಮುಖ್ಯ ದೇವತೆ, ಅಲಗುನಾಚಿ ಅಮ್ಮನ್ ದೇವಿಯು ಕೊಂಗು ವೆಲ್ಲಳ ಗೌಂಡರ್ ಸಮುದಾಯದ ಮುಖ್ಯ ದೇವತೆಯೂ ಆಗಿದ್ದಾಳೆ.
ನಂಬಿಕೆಯೊಂದರ ಪ್ರಕಾರ, ಈ ಸಮುದಾಯದ ಜನರು ಒಂದೊಮ್ಮೆ ತಮ್ಮ ದೇವತೆಯ ವಿಗ್ರಹದೊಂದಿಗೆ ಸಾಗುತ್ತಿರುವಾಗ ಇಲ್ಲಿ ತಂಗಿದ್ದರು. ನಂತರ ಎಚ್ಚರಗೊಂಡಾಗ, ಅವರಿಗೆ ಕಂಡುಬಂದ ವಿಷಯವೆಂದರೆ ತಮ್ಮ ಬಳಿಯಿದ್ದ ದೇವಿಯ ಮೂರ್ತಿ ಕಾಣೆಯಾಗಿರುವುದು. ಆದರಿಂದ ಇಲ್ಲಿಯೆ ದೇವಿಯ ದೇವಸ್ಥಾನವನ್ನು ನಿರ್ಮಿಸಿ ವಾಸಿಸಲು ನಿರ್ಧರಿಸಿದರಂತೆ.


Click it and Unblock the Notifications