ಸಮುದ್ರ ಮಟ್ಟದಿಂದ 6000 ಅಡಿ ಎತ್ತರದಲ್ಲಿರುವ ಅರ್ಜುನೇಶ್ವರ, ಇಲ್ಲಿನ ಇನ್ನೊಂದು ಪ್ರಮುಖವಾದ ದೇವಾಲಯವಾಗಿದೆ. ಇದು ಪಿಥೋರಗಡ್ ದಿಂದ ಹತ್ತಿ ಕಿ.ಮೀ ದೂರದಲ್ಲಿದೆ ಹಾಗೂ ಚಾರಣದ ಮೂಲಕ ಇಲ್ಲಿಗೆ ತಲುಪಬಹುದಾಗಿದೆ. ಇಲ್ಲಿ ಕೂಡ ಶಿವನ ಆರಾಧನೆ ನಡೆಯುತ್ತದೆ. ಇಲ್ಲಿನ ಜನರ ನಂಬಿಕೆಯ ಪ್ರಕಾರ, ಪಂಚ ಪಾಂಡವರಲ್ಲಿ ಒಬ್ಬನಾದ ಅರ್ಜುನ ಈ ದೇವಾಲಯವನ್ನು ಕಟ್ಟಿದ್ದನು. ಅರ್ಜುನ ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ ಬರುವ ಓರ್ವ ಶ್ರೇಷ್ಠ ಬಿಲ್ವಿದ್ಯಾ ಪ್ರವೀಣ ಯೋಧ.


Click it and Unblock the Notifications