Search
 • Follow NativePlanet
Share
ಮುಖಪುಟ » ಸ್ಥಳಗಳು» ಪೆರೆನ್

ಪೆರೆನ್ : ಮಾನಾವಾಭಾದಿತ ಅರಣ್ಯ ಭೂಮಿ

10

ಪ್ರಾಕೃತಿಕ ದೃಶ್ಯ ವೈಭವಗಳಿಂದ ಕಂಗೊಳಿಸುವ ದೇಶದ ರಾಜ್ಯಗಳಲ್ಲೊಂದು ನಾಗಾಲ್ಯಾಂಡ್.  ಈ ರಾಜ್ಯದಲ್ಲಿ, ನೀವು ಈಗಲೂ ಕಾಣಬಹುದಾದ, ಮಾನವನಿಂದ ಅತಿಕ್ರಮಿಸಲ್ಪಟ್ಟು ನಾಶಗೊಳ್ಳದೇ ಉಳಿದಿರುವ, ಅರಣ್ಯವಿರುವ ಒಂದು ಪ್ರದೇಶವಿದೆಯೆಂದರೆ ಅದು ಪೆರೆನ್ ಜಿಲ್ಲೆ.  ಇಲ್ಲಿನ ಮೂಲನಿವಾಸಿಗಳು ಈ ಅರಣ್ಯವನ್ನು ಧಾರ್ಮಿಕ ಶ್ರದ್ಧೆಯಿಂದ ರಕ್ಷಿಸಿರುವುದರಿಂದ, ಇದು ರಾಜ್ಯದ ಅತಿ ಆಕರ್ಷಣೆಯ ಸ್ಥಳಗಳಲ್ಲೊಂದಾಗಿದೆ.  ಪಶ್ಚಿಮದಲ್ಲಿ ದಿಮಾಪುರ್ ಜಿಲ್ಲೆ, ಪೂರ್ವದಲ್ಲಿ ಕೊಹಿಮಾ ಜಿಲ್ಲೆ, ದಕ್ಷಿಣದಲ್ಲಿ ಮಣಿಪುರ ರಾಜ್ಯ, ಮತ್ತು ಅಸ್ಸಾಂ ರಾಜ್ಯಗಳೊಂದಿಗೆ ಪೆರೆನ್ ಗಡಿಗಳನ್ನು ಹಂಚಿಕೊಂಡಿದೆ. ಪೆರೆನ್ ನ ಪಟ್ಟಣ ಭಾಗವು ಜಿಲ್ಲೆಯ ಆಡಳಿತ ಕೇಂದ್ರವಾಗಿದ್ದು, ಪ್ರಕೃತಿ ಪ್ರೇಮಿಗಳ ಪಾಲಿನ ಸ್ವರ್ಗವಾಗಿದೆ.  ಈ ಪಟ್ಟಣವು ಬೆಟ್ಟವೊಂದರ ತುದಿಯಲ್ಲಿದ್ದು, ನೆರೆಯ ಅಸ್ಸಾಂ ಮತ್ತು ಮಣಿಪುರ ರಾಜ್ಯಗಳ ಪಕ್ಷಿನೋಟವನ್ನು ಒದಗಿಸುತ್ತದೆ.

ಪೆರೆನ್ ನ ಪ್ರಾಕೃತಿಕ ಸೌಂದರ್ಯ - ಪ್ರವಾಸಿಗರಿಗೆ ರಸದೌತಣ

ಬರೈಲ್ ಪರ್ವತ ಶ್ರೇಣಿಯ ಭಾಗವಾಗಿರುವ ಪೆರೆನ್ ಜಿಲ್ಲೆಯು ಪ್ರಕೃತಿ ಮಾತೆಯಿಂದ ಮನದುಂಬಿ ಆಶೀರ್ವದಿಸಲ್ಪಟ್ಟಿದೆ.  ಇಲ್ಲಿ, ಈ ಜಿಲ್ಲೆಯಲ್ಲಿ ನೀವು ದಟ್ಟ, ಯಥೇಚ್ಚ ಸಸ್ಯ ಸಮೃದ್ಧಿ, ಭೋರ್ಗರೆದು ಹರಿವ ನದಿಗಳು, ಪ್ರಾಣಿಗಳು ಮತ್ತು ಪಕ್ಷಿಗಳ ವಿವಿಧ ಪ್ರಭೇಧಗಳನ್ನು ಕಾಣಬಹುದು.  ಈ ಸಸ್ಯಸಮೃದ್ಧಿಯು ಉಪಉಷ್ಣವಲಯದ ಕಾಡಿನಿಂದ ಕೂಡಿದೆ.  ಕಬ್ಬು ಮತ್ತು ಬಿದಿರು ಮರಗಳು ಅರಣ್ಯದ ಬಹುಭಾಗವಾಗಿದೆ.  ಇದರೊಂದಿಗೆ ಸೂಚಿಪರ್ಣ, ಯೂಕಲಿಪ್ಟಸ್, ಮತ್ತು ಅನೇಕ ವಿಧದ ಆರ್ಕಿಡ್ ಮಾದರಿಯ ಮರಗಳಿವೆ.  

ಈ ಜಿಲ್ಲೆಯು ಖನಿಜ ಮೂಲಗಳಿಂದಲೂ ಸಂಪನ್ನವಾಗಿವೆ.  ಆದರೆ, ದೊಡ್ಡ ಪ್ರಮಾಣದಲ್ಲಿ ಇನ್ನೂ ಕೂಡ ಗಣಿಗಾರಿಕೆಗೆ ಒಳಪಟ್ಟಿಲ್ಲ.  ಈ ಪಟ್ಟಣದ ಮತ್ತು ಇದರ ಸುತ್ತಮುತ್ತಲ ಇತರೆ ಪ್ರಮುಖ ಪ್ರವಾಸೀ ಆಕರ್ಷಣೆಗಳೆಂದರೆ ಇಂಟಾಂಕಿ ರಾಷ್ಟ್ರೀಯ ಉದ್ಯಾನ, ಮೌಂಟ್ ಪೊನ, ಮೌಂಟ್ ಕಿಸ್, ಬೆನ್ರು ಮತ್ತು ಪುಲಿವಾ ಗ್ರಾಮದ ಗುಹೆಗಳು.

ಬ್ರಿಟಿಷರ ಅತಿಕ್ರಮಣ

ಪೆರೆನ್ ಇತಿಹಾಸದ ಬಹುತೇಕ ಅವಧಿಯವರೆಗೆ ಪ್ರತ್ಯೇಕ ಸ್ಥಳವಾಗಿದ್ದು, ಇಲ್ಲಿನ ಜಿಲಿಂಗ್ ಗಳು ತಮ್ಮದೇ ಆದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತಿದ್ದರು.  1879 ರಲ್ಲಿ ಕೊಹಿಮಾ ಪ್ರದೇಶದ ಮೇಲೆ ಹಿಡಿತ ಸಾಧಿಸಿದ ನಂತರ ಬ್ರಿಟಿಷರು ನಾಗಾಲ್ಯಾಂಡ್ ನ ಈ ಭಾಗವನ್ನೂ ಅತಿಕ್ರಮಿಸಿ ಇಲ್ಲಿನ ಜನತೆಯ ಮೇಲೆ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದರು. ಬಹುಬೇಗನೇ ಬ್ರಿಟಿಷ್ ಅಧಿಕಾರಿಗಳು ಇಲ್ಲಿ ರಸ್ತೆಗಳು ಮತ್ತು ಇತರೆ ಸಂಪರ್ಕ ರಹದಾರಿಗಳನ್ನು, ಕೊಹಿಮಾ ಮತ್ತು ದಿಮಾಪುರ್ ಗೆ ಸಂಪರ್ಕಿಸುವಂತೆ ರಚಿಸಿದರು.  ಇದು, ಸನಿಹದ ಪ್ರದೇಶಗಳಿಂದ ಇಲ್ಲಿಗೆ ಬಂದು, ಇಲ್ಲಿನ ಪಟ್ಟಣ ಮತ್ತು ಗ್ರಾಮಗಳಲ್ಲಿ ಮಾರಾಟ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿತು.

ಪೆರೆನ್ ನ ಸಂಸ್ಕೃತಿ ಮತ್ತು ಜನರು

ಪೆರೆನ್ ಜಿಲ್ಲೆ ಮತ್ತು ಪಟ್ಟಣ ಪ್ರದೇಶವು ಜಿಲಿಂಗ್ ಎಂಬ ಬುಡಕಟ್ಟು ಜನಾಂಗದವರಿಂದ ಕೂಡಿದೆ.  ಈ ಜನಾಂಗವು ಮಣಿಪುರದ ಸೇನಾಪತಿ ಜಿಲ್ಲೆಯ ಕುಯಿಲ್ವಾಂಗ್ಡಿ ಎಂಬಲ್ಲಿ ವಿಕಾಸಗೊಂಡಿತು.  ಕಚಾ ನಾಗಾ ಗಳೆಂದು ಕರೆಯಲ್ಪಡುವ ಈ ಜನಾಂಗದ ಬಹುತೇಕ ಜನರು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಇಲ್ಲಿನ ಹವಾಗುಣ ಮತ್ತು ಮಣ್ಣಿನ ಗುಣಲಕ್ಷಣಗಳು, ಈ ಪ್ರದೇಶವನ್ನು ನಾಗಾಲ್ಯಾಂಡ್ ನ ಅತಿ ಫಲವತ್ತಾದ ಜಿಲ್ಲೆಗಳಲ್ಲಿ ಒಂದನ್ನಾಗಿಸಿದೆ.  ತಮ್ಮ ಪೂರ್ವಜರಿಂದ ಬಳುವಳಿಯಾಗಿ ಪಡೆದ ಶ್ರೀಮಂತ ಸಂಸ್ಕೃತಿ ಜಿಲಿಂಗ್ ಜನಾಂಗದ್ದು. ಇತರ ಎಲ್ಲಾ ಪ್ರಮುಖ ನಾಗಾ ಬುಡಕಟ್ಟು ಪಂಗಡದವರಂತೆ, ಈ ಜನಾಂಗವೂ ಕೂಡ ತಮ್ಮದೇ ಅದ ಕಲೆ, ಕರಕೌಶಲ್ಯ, ಆಹಾರ ಪದ್ಧತಿ, ನೃತ್ಯ, ಮತ್ತು ಸಂಗೀತ ಪ್ರಕಾರಗಳನ್ನು ಹೊಂದಿದ್ದು, ಇದು ಇವರನ್ನು ರಾಜ್ಯದ ಅತಿ   ಶಕ್ತಿಶಾಲಿ ಜನಾಂಗಗಳಲ್ಲೊಂದನ್ನಾಗಿ ಮಾಡಿವೆ.

ಬ್ರಿಟಿಷರು ತಮ್ಮ ಆಗಮನದೊಂದಿಗೆ, ಇಲ್ಲಿಗೆ ಮಿಷನರಿ ಸಂಸ್ಥೆಗಳು, ಸಂಸ್ಕೃತಿ, ಮತ್ತು ಜೀವನಶೈಲಿಯನ್ನೂ ಸಹ ಈ ಪ್ರದೇಶದಲ್ಲಿ ಪರಿಚಯಿಸಿದ್ದರಿಂದ, ಇಲ್ಲಿನ ಒಟ್ಟಾರೆ ಪರಿಸರವು ಸಂಪೂರ್ಣವಾಗಿ ಬದಲಾವಣೆಗೊಂಡಿತು.  ಕೊಹಿಮಾ ಮಿಷನ್ ಕೇಂದ್ರವು ಕ್ರೈಸ್ತೀಯತೆಯ ಸಂದೇಶವನ್ನು ಹರಡುವುದರ ಮೂಲಕ ಮತ್ತು ಈ ಪ್ರದೇಶದಲ್ಲಿ ತನ್ನ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಈ ಪ್ರದೇಶದಲ್ಲಿ ಕ್ರೈಸ್ತೀಯತೆಯು ಅಡಿಯಿಡಲು ಕಾರಣವಾಯಿತು.  ಪೆರೆನ್ ನ ಜನತೆಗೆ ಕ್ರಿಸ್ಮಸ್ ಅತಿ ದೊಡ್ಡ ಹಬ್ಬವಾಗಿದೆ. ಮಾತ್ರವಲ್ಲದೇ,  ಮಿಮ್ಕೂಟ್ ನಂತಹ ಕೃಷಿ ಸಂಬಂಧೀ ಹಬ್ಬಗಳೂ ಸಹ ಇಲ್ಲಿ ಆಚರಿಸಲ್ಪಡುತ್ತವೆ.  ಜನಾಂಗದ ಧೀರ ಯೋಧರ ಗೌರವಾರ್ಥ ಚೆಗಾ ಗಾಡಿ, ಹೇವಾ ಉತ್ಸವ ಮತ್ತು ಚಾಗಾ - ಗೀ ಯಂತಹ ಹಬ್ಬಗಳೂ ಇಲ್ಲಿ ಆಚರಿಸಲ್ಪಡುತ್ತವೆ.

ಆಂತರಿಕ ಪರವಾನಿಗಿ (Inner Line Permit)

ನಾಗಾಲ್ಯಾಂಡ್ ನ್ನು ಸಂದರ್ಶಿಸುವ ಪ್ರವಾಸಿಗರು ಇನ್ನರ್ ಲೈನ್ ಪರ್ಮಿಟ್ (Inner Line Permit) ಅನ್ನು ಹೊಂದಬೇಕಾಗಿದ್ದು, ಇದೊಂದು ಸರಳವಾದ ಪ್ರಯಾಣ ಅರ್ಜಿ ಆಗಿರುತ್ತದೆ.  ಇದು ಭಾರತದ ವಿವಿಧೆಡೆಯಿಂದ ಆಗಮಿಸುವ ದೇಶೀ ಪ್ರವಾಸಿಗರಿಗೆ ಅನ್ವಯಿಸುತ್ತದೆ.  ಈ ಅರ್ಜಿಯನ್ನು ನವದೆಹಲಿ, ಕೊಲ್ಕತ್ತಾ, ಗುವಾಹಾಟಿ, ಅಥವಾ ಶಿಲ್ಲಾಂಗ್ ನಲ್ಲಿರುವ ನಾಗಾಲ್ಯಾಂಡ್ ಹೌಸ್ ನಿಂದ ಸುಲಭವಾಗಿ ಪಡೆಯಬಹುದು.  ಈ ಪರವಾನಿಗಿಗಾಗಿ ದಿಮಾಪುರ್, ಕೊಹಿಮಾ, ಮತ್ತು ಮೊಕೊಕ್ಚುಂಗ್ ನ ಜಿಲ್ಲಾಧಿಕಾರಿಗಳಿಗೂ ಸಹ ಅರ್ಜಿ ಸಲ್ಲಿಸಬಹುದು.  ವಿದೇಶಿ ಪ್ರವಾಸಿಗರು ಇನ್ನು ಮುಂದೆ ಈ ILP ಯನ್ನು ಹೊಂದಿರುವುದರ ಅಗತ್ಯವಿಲ್ಲ.  ಆದರೆ, ಅವರು ತಾವು ಭೇಟಿ ನೀಡುತ್ತಿರುವ ಜಿಲ್ಲೆಯ ಫಾರೇನ್ ರೆಜಿಸ್ಟ್ರಾರ್ ಕಛೇರಿಯಲ್ಲಿ ನೊಂದಾಯಿಸಿಕೊಳ್ಳಬೇಕಾಗುತ್ತದೆ.

ಪೆರೆನ್ ಪ್ರಸಿದ್ಧವಾಗಿದೆ

ಪೆರೆನ್ ಹವಾಮಾನ

ಪೆರೆನ್
4oC / 39oF
 • Partly cloudy
 • Wind: SW 7 km/h

ಉತ್ತಮ ಸಮಯ ಪೆರೆನ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪೆರೆನ್

 • ರಸ್ತೆಯ ಮೂಲಕ
  ಪೆರೆನ್ ಜಿಲ್ಲೆಯು ದಿಮಾಪುರ್ ಮತ್ತು ರಾಜ್ಯದ ರಾಜಧಾನಿ ಕೊಹಿಮಾದೊಂದಿಗೆ ಹೆದ್ದಾರಿಯ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಈ ರಸ್ತೆಯು ಪೆರೆನ್ ಅನ್ನು ಜಗತ್ತಿನ ಇತರೆ ಭಾಗಗಳಿಗೆ ತೆರೆದಿಡುತ್ತದೆ. ಪೆರೆನ್ ನಿಂದ ದಿಮಾಪುರ್ 77 ಕಿ. ಮೀ. ದೂರವಿದ್ದರೆ, ಕೊಹಿಮವು 139 ಕಿ. ಮೀ. ದೂರದಲ್ಲಿದೆ. ನಾಗಲ್ಯಾಂಡ್ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ಮತ್ತು ಮಿತವೇಗಿ ಕ್ಯಾಬ್ ಗಳು ಪೆರೆನ್ ಅನ್ನು ಈ ಎರಡು ಸ್ಥಳಗಳಿಗೆ ಸಂಪರ್ಕಿಸುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಪೆರೆನ್ ಜಿಲ್ಲೆಯಲ್ಲಿ ಯಾವುದೇ ರೈಲ್ವೆ ನಿಲ್ದಾಣವಿರುವುದಿಲ್ಲ. ಇಲ್ಲಿಂದ 77 ಕಿ. ಮೀ. ದೂರದಲ್ಲಿರುವ ದಿಮಾಪುರ್ ರೈಲ್ವೆ ನಿಲ್ದಾಣವು, ದೇಶದ ಇತರೆ ಭಾಗಗಳೊಂದಿಗೆ ಸಂಪರ್ಕಿಸುವ ಪ್ರಮುಖ ನಿಲ್ದಾಣವಾಗಿದೆ. ದಿನನಿತ್ಯ ಓಡಾಡುವ ರೈಲುಗಳು ಈ ನಿಲ್ದಾಣದಿಂದ ಗುವಾಹಾಟಿ, ಕೊಲ್ಕತ್ತಾ, ಮತ್ತು ನವದೆಹಲಿಯಂತಹ ನಗರಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಪೆರೆನ್ ನಿಂದ ಈ ರೈಲ್ವೆ ನಿಲ್ದಾಣಕ್ಕೆ ಮಿತವೇಗಿಗಳು ಸುಲಭದಲ್ಲಿ ಲಭ್ಯವಿವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಪೆರೆನ್ ಪಟ್ಟಣದಲ್ಲಿ ವಿಮಾನ ನಿಲ್ದಾಣವಿರುವುದಿಲ್ಲ. ಇಲ್ಲಿಂದ 71 ಕಿ. ಮೀ. ದೂರದಲ್ಲಿರುವ ದಿಮಾಪುರ್ ವಿಮಾನ ನಿಲ್ದಾಣವು ಪೆರೆನ್ ಗೆ ಒಂದು ಪರಿಪೂರ್ಣ ಗೇಟ್ ವೇ ಯಂತೆ ಸೇವೆ ಸಲ್ಲಿಸುತ್ತದೆ. ಈ ವಿಮಾನ ನಿಲ್ದಾಣವು ಗುವಾಹಾಟಿ ಮತ್ತು ಕೊಲ್ಕತ್ತಾ ನಡುವೆ ನಿತ್ಯ ವಿಮಾನ ಹಾರಾಟದ ಮೂಲಕ ಸಂಪರ್ಕವನ್ನು ಹೊಂದಿದೆ. ವಿಮಾನ ನಿಲ್ದಾಣದಿಂದ ಗುವಾಹಟಿಗೆ ಮಿತವೇಗಿಗಳು ಮತ್ತು ಟ್ಯಾಕ್ಸಿಗಳು ಸುಲಭದಲ್ಲಿ ಲಭ್ಯವಿವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
15 Sep,Sun
Return On
16 Sep,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Sep,Sun
Check Out
16 Sep,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Sep,Sun
Return On
16 Sep,Mon
 • Today
  Peren
  4 OC
  39 OF
  UV Index: 2
  Partly cloudy
 • Tomorrow
  Peren
  2 OC
  35 OF
  UV Index: 2
  Heavy rain at times
 • Day After
  Peren
  4 OC
  40 OF
  UV Index: 2
  Light rain