Search
  • Follow NativePlanet
Share
ಮುಖಪುಟ » ಸ್ಥಳಗಳು » ಪೆರೆನ್ » ಆಕರ್ಷಣೆಗಳು » ಇಟಾಂಗ್‍ಕಿ ರಾಷ್ಟ್ರೀಯ ಉದ್ಯಾನವನ

ಇಟಾಂಗ್‍ಕಿ ರಾಷ್ಟ್ರೀಯ ಉದ್ಯಾನವನ, ಪೆರೆನ್

1

ಪೆರೆನ್ ಪಟ್ಟಣದಿಂದ 40 ಕಿ. ಮೀ. ಹಾಗೂ ದಿಮಾಪುರ್ ನಿಂದ 37 ಕಿ. ಮೀ. ದೂರದಲ್ಲಿರುವ ಇಟಾಂಗ್‍ಕಿ ರಾಷ್ಟ್ರೀಯ ಉದ್ಯಾನವನವು ಇಂಟಾಂಕಿ ಎಂದೂ ಸಹ ಹಲವರಿಂದ ಗುರುತಿಸಲ್ಪಡುತ್ತದೆ.  1923 ರಲ್ಲಿ ಬ್ರಿಟಿಷ್ ಆಡಳಿತಗಾರರಿಂದ ಸ್ಥಾಪಿಸಲ್ಪಟ್ಟ ಈ ಉದ್ಯಾನವನವು 200 ಚದರ ಕಿ. ಮೀ. ಗಳಷ್ಟು ಹರಡಿಕೊಂಡಿದೆ. ಈಶಾನ್ಯದ ಅತ್ಯುತ್ತಮ ರಾಷ್ಟ್ರೀಯ ಉದ್ಯಾನಗಳಲ್ಲೊಂದು ಎಂದು ಪರಿಗಣಿತವಾದ ಈ ಉದ್ಯಾನವನವು, ದಟ್ಟ ಮಳೆಕಾಡುಗಳನ್ನು ಹೊಂದಿದ್ದು, ಅನೇಕ ಪಕ್ಷಿಗಳು, ಸರೀಸೃಪಗಳು, ಮತ್ತು ಸಸ್ತನಿಗಳಿಗೆ ಪ್ರಾಕೃತಿಕ ತಾಣವಾಗಿದೆ.  ಪರ್ವತಗಳು, ಕಡಿದಾದ ಬಂಡೆಗಳು, ಮತ್ತು ದಟ್ಟ ಅರಣ್ಯಗಳು ಈ ಸ್ಥಳವನ್ನು ಕ್ಯಾಂಪಿಂಗ್ ಮತ್ತು ಇತರ ಸಾಹಸಮಯ ಚಟುವಟಿಕೆಗಳಿಗೆ ಅತ್ಯುತ್ತಮ ತಾಣವನ್ನಾಗಿಸಿವೆ.

ಇಲ್ಲಿ, ಈ ರಾಷ್ಟ್ರೀಯ ಉದ್ಯಾನವನದಲ್ಲಿ, ನೀವು ಕಾಡುಕೋಣಗಳು (ಮಿಥುನ್) ಮತ್ತು ಹೂಲೊಕ್ ಗಿಬ್ಬಾನ್ ಎಂದು ಕರೆಯಲ್ಪಡುವ ಮಂಗಗಳನ್ನು ಕಾಣಬಹುದು.  ಚಿಂಪಾಂಜಿಯನ್ನು ಹೋಲುವ ಈ ಮಂಗಗಳು ನಿಮಗೆ ನಾಗಾಲ್ಯಾಂಡ್ ನಲ್ಲಿ ಮಾತ್ರವೇ ಕಾಣಸಿಗುತ್ತವೆ.  ಇವಿಷ್ಟು ಮಾತ್ರವಲ್ಲದೇ, ಈ ಉದ್ಯಾನದಲ್ಲಿ ಹುಲಿಗಳು, ಸ್ಲಾತ್ ಬೇರ್ ಎಂಬ ಒಂದು ಜಾತಿಯ ಕರಡಿಗಳು, ಕಾಡುನಾಯಿಗಳು, ಹಾರುವ ಅಳಿಲುಗಳು ಇವೆಲ್ಲವೂ ಇದ್ದು, ಇದು ಈ ಜಿಲ್ಲೆಗೆ ಭೇಟಿ ನೀಡುವ ಯಾವನೇ ಒಬ್ಬ ಪ್ರವಾಸಿಗನೂ ಸಹ ಇಲ್ಲಿಗೆ ಭೇಟಿ ಕೊಟ್ಟೇ ಕೊಡುವಂತೆ ಮಾಡುತ್ತದೆ.  ಮಾತ್ರವಲ್ಲದೇ, ಮಾನವಾಭಾದಿತ ಅರಣ್ಯವು ಈ ಉದ್ಯಾನದ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat

Near by City