Search
  • Follow NativePlanet
Share
ಮುಖಪುಟ » ಸ್ಥಳಗಳು » ಪಯ್ಯೋಲಿ » ಆಕರ್ಷಣೆಗಳು » ಪಯ್ಯೋಲಿ ಬೀಚ್

ಪಯ್ಯೋಲಿ ಬೀಚ್, ಪಯ್ಯೋಲಿ

2

ಬೀಚ್‌ಗಳ ತವರು ಎಂದೇ ಪ್ರಸಿದ್ಧವಾದ ಕೇರಳಾದ ಪ್ರಮುಖ ಬೀಚ್‌ಗಳ ಸಾಲಿನಲ್ಲಿ ಪಯ್ಯೋಲಿ ಬೀಚ್‌ ಕೂಟ ಮಹತ್ವವಾದದ್ದು. ಹೆಚ್ಚು ಆಳವಿಲ್ಲದ ಇಲ್ಲಿನ ಕಡಲತಡಿ ವಿಹಾರ ಪ್ರಿಯರಿಗೆ ಉತ್ತಮವಾಗಿದೆ. ಶಾಂತ ಪರಿಸರ ಮತ್ತು ಕಡಲ ಸೊಬಗು ಮನಸ್ಸನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇಲ್ಲಿನ ಆಹಾರ ಮತ್ತು ಉಪಚಾರಗಳಿಗೆ ಮನಸೋತು ಮತ್ತೆ ಮತ್ತೆ ಇಲ್ಲಿಗೆ ಬರಬೇಕೆನ್ನಿಸುತ್ತದೆ. ನಗರ ಕೇಂದ್ರದಿಂದ ಪಯ್ಯೋಲಿ ಬೀಚ್ 14 ಕಿಲೋಮೀಟರುಗಳಷ್ಟು ದೂರದಲ್ಲಿದ್ದು, ಅಳಿವಿನಂಚಿನಲ್ಲಿರುವ ಶೋರ್‌ ಅಲಿವ್‌ ರಿಡ್ಲೇ ನಂತರ ಆಮೆಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ಆಮೆಗಳು ನವೆಂಬರ್ ಮತ್ತು ಡಿಸೆಂಬರ್ ಅವಧಿಯಲ್ಲಿ  ಮೊಟ್ಟೆಗಳನ್ನಿಡುವ ಸಲುವಾಗಿ ದಡಕ್ಕೆ ಬರುತ್ತವೆ. ಆಗ ಅವುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ನೀವು ವನ್ಯ ಜೀವಿ ಪ್ರಿಯರಾಗಿದ್ದರೆ ಈ ಸಂದರ್ಭವನ್ನು ಮಿಸ್ ಮಾಡಿಕೊಳ್ಳಬೇಡಿ. ಆಮೆಗಳ ಜೀವನ ಕ್ರಮವನ್ನು ಅಧ್ಯಯನ ಮಾಡಲು ಇದಕ್ಕಿಂತ ಉತ್ತಮ ಅವಕಾಶ ಇನ್ನೊಂದು ಸಿಗಲಾರದು ನಿಮಗೆ. ಇವೆಲ್ಲವುಗಳ ಜತೆ ಸುತ್ತಲಿನ ರಮಣೀಯ ಪರಿಸರ ಮತ್ತು ಬಾರ್‌ಗಳು ನಿಮ್ಮನ್ನು ಕೈಬೀಸಿ ಕರೆಯುತ್ತದೆ.

ಇಲ್ಲಿನ ಆತಿಥ್ಯ ಮತ್ತು ಬೆಚ್ಚಗಿನ ತಿನಿಸುಗಳು ನಿಮ್ಮನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತವೆ. ಪಯ್ಯೋಲಿ ಚಿಕನ್ ಪ್ರೈ  ನಿಮ್ಮ ನಾಲಿಗೆ ಚಪಲವನ್ನು ಉದ್ದೀಪಿಸುತ್ತದೆ. ಪ್ರಾಚೀನ ಕಾಲದ ನಾವಿಕರು ಕೂಡ ಈ ಪ್ರದೇಶವನ್ನು ಮೆಚ್ಚಿ ಇಲ್ಲಿಯೇ ಠಾವು ಹೂಡಿದ್ದರ ಬಗ್ಗೂ ಮಾಹಿತಿಗಳಿವೆ. ವೆಲ್ಲಿಯಾಂಕಲ್ಲು ಎಂದು ಕರೆಯಲ್ಪಡುವ ಬೃಹತ್ ಶಿಲಾರಚನೆ ಇಲ್ಲಿನ ಮತ್ತೊಂದು ವಿಶೇಷ. ನಾವಿಕರಿಗೆ ದಿಕ್ಸೂಚಿಯಾಗಲೆಂಬ ಉದ್ದೇಶದಿಂದ ಎತ್ತರದ ಸ್ಥಳದಲ್ಲಿ ನಿರ್ಮಿಸಿರುವ ಲೈಟ್‌ಹೌಸ್‌ ಕೂಡ ನಿಮ್ಮನ್ನು ಕೆಲಕಾಲ ಹಿಡಿದು ನಿಲ್ಲಿಸುತ್ತದೆ. ಇಲ್ಲಿ ದೋಣಿವಿಹಾರವನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಮೀಪದ ಬಂಡೆಗಳನ್ನೇರುತ್ತಾ, ಕಡಲನ್ನು ಆಸ್ವಾದಿಸಬಹುದಾಗಿದ್ದು, ಸುತ್ತಮುತ್ತಲಿನ ರಮಣೀಯ ದೃಶ್ಯಗಳು ನಿಮ್ಮ ಜ್ಞಾಪಕ ಚಿತ್ರಶಾಲೆಯನ್ನು ಇನ್ನಷ್ಟು  ಸಿಂಗರಿಸಲಿವೆ. ಇಲ್ಲಿ ಪಕ್ಷಗಳೂ ವಲಸೆ ಬರುತ್ತವಾದ್ದರಿಂದ ಪಕ್ಷಿಪ್ರಿಯರೂ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed