ಖಿಲಾ ಹೌಸ್ ನ್ನು ಜಲಾನ್ ಹೌಸ್ ಎಂದೂ ಕರೆಯಲಾಗುತ್ತದೆ. ಇದು ಖಾಸಗಿ ನಿವಾಸಿ ತಾಣ. ಖಿಲಾ ಹೌಸ್ 1919ರಿಂದ ಜಲಾನ್ ಕುಟುಂಬದ ಐದು ತಲೆಮಾರುಗಳು ವಾಸಿಸುತ್ತಿರುವ ಮನೆ. ಕಲೆ ಮತ್ತು ಪ್ರಾಚ್ಯವಸ್ತುಗಳ ಸಂಗ್ರಹಕ್ಕೆ ಇದು ಹೆಸರುವಾಸಿ. ಇದು ವೈಯಕ್ತಿಕ ಸಂಗ್ರಹ ಮತ್ತು ರಾಧಾಕೃಷ್ಣ ಜಲಾನ್ ಎನ್ನುವವರು ಇದರ ಉಸ್ತುವಾರಿಯಾಗಿದ್ದಾರೆ. ಅಪಾಯಿಂಟ್ ಮೆಂಟ್ ಪಡೆದು ಅಥವಾ ಆಹ್ವಾನದ ಮೇರೆಗೆ ಬರುವ ಪ್ರವಾಸಿಗರನ್ನು ಜಲಾನ್ ಕುಟುಂಬ ತುಂಬಾ ಆತ್ಮೀಯವಾಗಿ ಸ್ವಾಗತಿಸುತ್ತದೆ.


Click it and Unblock the Notifications