ಮೋತಿ ಮಹಲ್ ಹಿಂಬದಿಯಲ್ಲಿರುವ ಶೀಶ್ ಮಹಲ್ ಅನ್ನು ಮಹಾರಾಜಾ ನರೇಂದ್ರ ಸಿಂಗನು 1847 ರಲ್ಲಿ ನಿರ್ಮಿಸಿದನು. ಇದು ಅಂದಿನ ಪಟಿಯಾಲಾ ರಾಜರ ಮುಖ್ಯ ವಾಸಸ್ಥಾನವಾಗಿತ್ತು. ಈ ಒಂದು ಸ್ಮಾರಕವನ್ನು ಕನ್ನಡಿಗಳ ಅರಮನೆ ಅಥವಾ 'ಪ್ಯಾಲೇಸ್ ಆಫ್ ಮಿರರ್‍ಸ್' ಎಂದು ಕರೆಯಲಾಗುತ್ತದೆ. ಏಕೆಂದರೆ ಇದರ ನಿರ್ಮಾಣದಲ್ಲಿ ಬಣ್ಣದ ಗಾಜುಗಳು ಹಾಗು ಕನ್ನಡಿಗಳು ಬಹುವಾಗಿ ಬಳಸಲ್ಪಟ್ಟಿವೆ. ಆದ್ದರಿಂದಲೆ ಇದನ್ನು ಶೀಶ್(ಹಿಂದಿಯಲ್ಲಿ ಶೀಶಾ ಎಂದರೆ ಕನ್ನಡಿ ಅಥವಾ ಗಾಜು ಎಂದಾಗುತ್ತದೆ) ಮಹಲ್ ಎನ್ನುತ್ತಾರೆ. ಈ ಅರಮನೆಯ ಮುಂದಿರುವ ಸುಂದರವಾದ ಕೆರೆ ಮತ್ತು ಅದಕ್ಕೆ ಕಟ್ಟಲಾಗಿರುವ ಸೇತುವೆ ಈ ಪರಿಸರದ ಒಟ್ಟಾರೆ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಈ ಸೇತುವೆಯನ್ನು ಲಕ್ಷ್ಮಣ್ ಝೂಲಾ ಎಂದು ಕರೆಯುತ್ತಾರೆ. ಈ ಅರಮನೆಯಲ್ಲಿ ಒಂದು ಸಂಗ್ರಹಾಲಯವಿದ್ದು, ಜಗತ್ತಿನ ಹಲವು ಭಾಗಗಳ ಪದಕಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. ಈ ಅರಮನೆಯ ಸೂಕ್ಷ್ಮವಾದ ಕೆತ್ತನೆಯ ಕೆಲಸ, ಸುಂದರವಾಗಿ ವಿನ್ಯಾಸಗೊಂಡ ಗೋಡೆಗಳು ಅಂದಿನ ರಾಜಸ್ಥಾನ ಹಾಗು ಕಾಂಗ್ರಾ ಭಾಗದ ಕುಶಲಕರ್ಮಿಗಳ ನೈಪುಣ್ಯತೆಯನ್ನು ತೋರುತ್ತದೆ. ಸಾಮಾನ್ಯವಾಗಿ ಪ್ರತಿ ವರ್ಷವೂ ಶೀಶ್ ಮಹಲ್ಲಿನಲ್ಲಿ ಸಾಂಪ್ರದಾಯಿಕ ಉತ್ಸವಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿರುತ್ತದೆ.


Click it and Unblock the Notifications