Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟಿಯಾಲಾ » ಹವಾಮಾನ

ಪಟಿಯಾಲಾ ಹವಾಮಾನ

ಪಟಿಯಾಲಾ ನಗರವು ಉಷ್ಣವಲಯದ ಹವಾಗುಣವನ್ನು ಹೊಂದಿದ್ದು, ಬೇಸಿಗೆ, ಮಳೆ ಮತ್ತು ಚಳಿಗಾಲದ ಋತುಗಳನ್ನು ಅನುಭವಿಸುತ್ತದೆ. ಈ ನಗರಕ್ಕೆ ಭೇಟಿ ನೀಡಲು ಪ್ರಶಸ್ತವಾದ ಸಮಯವೆಂದರೆ ಅಕ್ಟೋಬರ್ ಹಾಗು ಮಾರ್ಚ್ ಮಧ್ಯದ ಅವಧಿ. ಈ ಸಂದರ್ಭದಲ್ಲಿ ಪಟ್ಟಣವು ಹಿತ ಹಾಗು ಆಹ್ಲಾದಕರವಾದ ವಾತಾವರಣವನ್ನು ಅನುಭವಿಸುತ್ತದೆ.

ಬೇಸಿಗೆಗಾಲ

ಬೇಸಿಗೆ ಕಾಲಾವಧಿ: ಮಾರ್ಚ್ - ಜೂನ್. ದಾಖಲಾಗುವ ಗರಿಷ್ಠ ಉಷ್ಣಾಂಶ 43° C ಹಾಗು ಕನಿಷ್ಠ ಉಷ್ಣಾಂಶ 30°C. ಮೇ ತಿಂಗಳು ಶಾಖಮಯ ತಿಂಗಳಾಗಿರುತ್ತದೆ.

ಮಳೆಗಾಲ

ಮಳೆಗಾಲದ ಅವಧಿ: ಜುಲೈ - ಅಕ್ಟೋಬರ್. ಬೇಸಿಗೆಯ ಧಗೆಯಿಂದ ಬೆಂಡಾದ ಜನತೆಗೆ ಈ ಕಾಲವು ಹಿತವನ್ನುಂಟು ಮಾಡುತ್ತದೆ. ಪಟ್ಟಣವು ಉತ್ತಮ ಎನ್ನಬಹುದಾದ ಮಳೆಯನ್ನು ಪಡೆಯುತ್ತದೆ.

ಚಳಿಗಾಲ

ಚಳಿಗಾಲದ ಅವಧಿ: ಅಕ್ಟೋಬರ್ - ಫೆಬ್ರುವರಿ. ಈ ಸಮಯದಲ್ಲಿ ದಾಖಲಾಗುವ ಗರಿಷ್ಠ ಉಷ್ಣಾಂಶ 25° C ಹಾಗು ಕನಿಷ್ಠ ಉಷ್ಣಾಂಶ 5°C.