ಪರ್ವಾನೂದಿಂದ 24 ಕಿ.ಮೀ ದೂರದಲ್ಲಿದೆ ಮಾನಸಾ ದೇವಿ ದೇವಸ್ಥಾನ. ಇಲ್ಲಿನ ಜನಪ್ರಿಯ ಧಾರ್ಮಿಕ ಕೇಂದ್ರಗಳಲ್ಲೊಂದು. ರಾಷ್ಟ್ರೀಯ ಹೆದ್ದಾರಿ 22 ರಲ್ಲಿ ಇಲ್ಲಿಗೆ ತಲುಪಬಹುದು. ಮಣಿಮಜ್ರದ ರಾಜ ಮಹಾರಾಜ ಗೋಪಾಲ ಸಿಂಗ್ ಈ ದೇವಸ್ಥಾನವನ್ನು 1811ರಿಂದ 1815 ರ ಅವಧಿಯಲ್ಲಿ ನಿರ್ಮಿಸಿದ್ದನು. ದೇವಿ ದುರ್ಗೆಯ ಇನ್ನೊಂದು ಅವತಾರ ಮಾನಸಾ ದೇವಿ ಎಂದು ಹೇಳಲಾಗುತ್ತದೆ. ನವರಾತ್ರಿಯಲ್ಲಿ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಮಾನಸಾ ದೇವಿಯನ್ನು ಪ್ರಾರ್ಥಿಸಿದ ಭಕ್ತರಿಗೆ ಪುಣ್ಯ ನೀಡುತ್ತಾಳೆ ಎಂದು ನಂಬಲಾಗಿದೆ.