Search
  • Follow NativePlanet
Share
ಮುಖಪುಟ » ಸ್ಥಳಗಳು » ಪರ್ವಾನೂ » ಹವಾಮಾನ

ಪರ್ವಾನೂ ಹವಾಮಾನ

ಈ ಸುಂದರ ಪಟ್ಟಣಕ್ಕೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಬೇಸಿಗೆಗಾಲ. ಈ ಅವಧಿಯಲ್ಲಿ ವಾತಾವರಣವು ಪ್ರಶಾಂತವಾಗಿರುತ್ತದೆ ಮತ್ತು ಅನುಕೂಲಕರವಾಗಿರುತ್ತದೆ.

ಬೇಸಿಗೆಗಾಲ

(ಮಾರ್ಚ್‌ನಿಂದ ಮೇ) : ಪರ್ವಾನೂದಲ್ಲಿನ ಬೇಸಿಗೆಗಾಲದ ಅವಧಿಯು ಮಾರ್ಚ್‌ನಿಂದ ಮೇ ತನಕ ಇರುತ್ತದೆ. ಗರಿಷ್ಠ ತಾಪಮಾನವು 30 ಡಿಗ್ರಿ ದಾಖಲಾದರೆ ಕನಿಷ್ಟ ತಾಪಮಾನವು 8 ಡಿಗ್ರಿ ದಾಖಲಾಗುತ್ತದೆ. ಮೇ ಹೊರತಾಗಿ ವರ್ಷದ ಇತರೆ ದಿನಗಳಲ್ಲಿ ವಾತಾವರಣವು ಪ್ರಶಾಂತವಾಗಿರುತ್ತದೆ.

ಮಳೆಗಾಲ

(ಜೂನ್‌ನಿಂದ ಸಪ್ಟೆಂಬರ್) : ಪರ್ವಾನೂದಲ್ಲಿನ ಮಳೆಗಾಲವು ಜೂನ್‌ನಲ್ಲಿ ಆರಂಭವಾಗಿ ಸಪ್ಟೆಂಬರಿನವರೆಗೂ ಮುಂದುವರಿಯುತ್ತದೆ. ಈ ಅವಧಿಯಲ್ಲಿ ವಿಪರೀತ ಮಳೆ ಬೀಳುತ್ತದೆ. ಹೀಗಾಗಿ ತಾಪಮಾನವು ಸುಮಾರು 20 ಡಿಗ್ರಿಯ ಸಮೀಪವೇ ಇರುತ್ತದೆ. ಮಳೆಗಾಲದ ನಂತರ ತಾಪಮಾನವು ಪ್ರಶಾಂತವಾಗಿರುತ್ತದೆ.

ಚಳಿಗಾಲ

(ನವೆಂಬರಿನಿಂದ ಫೆಬ್ರುವರಿ) : ಪರ್ವಾನೂದಲ್ಲಿನ ಚಳಿಗಾಲವು ನವೆಂಬರಿನಿಂದ ಫೆಬ್ರುವರಿಯ ಮಧ್ಯೆ ಇರುತ್ತದೆ. ಈ ಅವಧಿಯಲ್ಲಿ ವಿಪರೀತ ಚಳಿ ಇದ್ದು, -8 ಡಿಗ್ರಿಗೆ ತಾಪಮಾನ ಇಳಿಯುತ್ತದೆ. ಗರಿಷ್ಠ ತಾಪಮಾನವು ಈ ಅವಧಿಯಲ್ಲಿ 8 ಡಿಗ್ರಿಗಿಂತ ಮೇಲೆ ಹೋಗುವುದೇ ಇಲ್ಲ. ಡಿಸೆಂಬರ್ ಮತ್ತು ಜನವರಿ ತಿಂಗಳು ಇಲ್ಲಿ ವಿಪರೀತ ಚಳಿಯ ದಿನಗಳು.