ಇದೊಂದು ಬಾಂಬೋಲಿಮ್ ಹಳ್ಳಿಯ 'ಪ್ಯಾರಿಶ್ ಚರ್ಚ್'. ಇದನ್ನು 'ಅವರ್ ಲೇಡಿ ಆಫ್ ಬೆಲೆಮ್ ಅಥವಾ ಬೆತ್ಲಹೇಮ್' ಎಂದೂ ಕೂಡ ಕರೆಯಲಾಗುತ್ತದೆ. ಇದು ಗೋವಾದ ಬೇರೆಡೆಗಳಿಗಿಂತಲೂ ತೀರ ಇತ್ತಿಚಿನ ಚರ್ಚ್ ಆಗಿದೆ ಹಾಗು ಶ್ವೇತ ವರ್ಣದಿಂದ ಕೂಡಿದ ಕಟ್ಟಡ, ಬೃಹತ್ ಆಕಾರದ ಇಳಿಜಾರಿನ ಛಾವಣಿಗಳೊಂದಿಗೆ ನೋಡಲು ಅಷ್ಟೆ ಸೊಗಸಾಗಿದೆ.
ಇದು ಬಾಂಬೋಲಿಮ್ ನಲ್ಲಿರುವ 'ಒರ್ಟೆ ಡಿ ವೈಗಾರ್' ಎಂಬ ಗುಡ್ಡದ ಮೇಲಿದೆ. ಬಾಂಬೋಲಿಮ್ ಪಣಜಿಯ ದಕ್ಷಿಣಕ್ಕೆ ಕೆಲವೆ ಕಿ.ಮೀ ದೂರದಲ್ಲಿದೆ. ಪ್ರತಿ ಜನವರಿಯ ಮೊದಲನೆ ಭಾನುವಾರದಂದು ಇಲ್ಲಿ ಅವರ್ ಲೇಡಿ ಆಫ್ ಬೆತ್ಲಹೇಮ್' ಹೆಸರಿನಲ್ಲಿ ಉತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ.
ಪ್ರಮುಖ 3 ನಗರಗಳು ಹಾಗು ಉತ್ತರ ಗೋವಾದಿಂದ ಬಾಂಬೋಲಿಮ್ ಬಸ್ಸುಗಳು ಹಾಗು ಕ್ಯಾಬ್ ಗಳು ಲಭ್ಯವಿವೆ. ಇದು ಪನ್ವೇಲ್ ಹಾಗು ಕನ್ಯಾಕುಮಾರಿ ಹೆದ್ದಾರಿಗೆ ಅತಿ ಹತ್ತಿರದಲ್ಲಿದೆ.


Click it and Unblock the Notifications