ನಿಂಬೂ ಕಾ ನಾಥ್ ಪಾಲಿಯ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಸ್ಥಳವು ಫಾಲ್ನ ಮತ್ತು ಸಂಡೆರವ್ ಮಾರ್ಗದ ನಡುವೆ ನೆಲೆಗೊಂಡಿದೆ. ಹಿಂದೂ ಪುರಾಣಗಳ ಪ್ರಕಾರ ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಇಲ್ಲಿ ಆಶ್ರಯ ಪಡೆದಿದ್ದರಂತೆ. ಪಾಂಡವ ಮಾತೆಯಾದ ಕುಂತಿಯು ಇಲ್ಲಿ ಶಿವನನ್ನು ಆರಾಧಿಸಿದಳೆಂದು ಪ್ರತೀತಿ ಇದೆ. ಪ್ರವಾಸಿಗರು ಫಾಲ್ನದಿಂದ ಬಸ್ಸಿನ ಮೂಲಕ ಇಲ್ಲಿಗೆ ತಲುಪಬಹುದು. ಅನಂತರ ಇಲ್ಲಿನ ಸ್ಥಳೀಯ ಟ್ಯಾಕ್ಸಿ ಮತ್ತು ಜೀಪ್ ಮೂಲಕ ನಿಂಬೂ ಕಾ ನಾಥ್ ಗೆ ತಲುಪಬಹುದು.


Click it and Unblock the Notifications