ಬೌದ್ದ ವಿಹಾರಗಳು ಮತ್ತು ಸನ್ಯಾಸ ಮಠಗಳಿಗೆ, ಶೇರ್ ಬ್ಲಿಂಗ್ ಹೆಸರುವಾಸಿ. ಪ್ರಸಿದ್ದ ಬೌದ್ಧ ಸಂತ ತೈ ಸಿಟಿ ರಿಂಪೋಚಿ, ಬೆಟ್ಟಗಳ ಸಾಲಿನ ಮಧ್ಯೆ ಇರುವ ಈ ಸ್ಥಳವನ್ನು ತನ್ನ ವಾಸಕ್ಕೆ ಆರಿಸಿಕೊಂಡ. ಹಚ್ಚ ಹಸಿರು ವನಗಳ ಮಧ್ಯೆ ಇರುವ ಸ್ತೂಪ ಚೆಂದವನ್ನು ಹೆಚ್ಚಿಸುತ್ತದೆ. ವರ್ಷದ ಎಲ್ಲ ದಿನಗಳಲ್ಲೂ, ಶಾಂತಿ ಪ್ರಿಯರು ಮತ್ತು ಬೌದ್ದ ಯಾತ್ರಾರ್ಥಿಗಳು ಇಲ್ಲಗೆ ಭೇಟಿ ನೀಡುತ್ತಾರೆ. ಪ್ರತಿದಿನ ಮಧ್ಯಾಹ್ನ ಮುಖ್ಯ ಭಿಕ್ಷು ರಿಂಪೋಚಿ ತನ್ನ ಅನುಯಾಯಿಗಳಿಗೆ ಹಾರೈಕೆ ಮತ್ತು ಆಶೀರ್ವಚನ ನೀಡುತ್ತಾರೆ.


Click it and Unblock the Notifications