ಧೌಲಾಧರ್ ರಾಷ್ಟ್ರೀಯ ಉದ್ಯಾನವನ ಅಥವಾ ಗೋಪಾಲಪುರ ಝೂ ಪಾಲಂಪೂರದ ಪ್ರಮುಖ ಆಕರ್ಷಣೆ. ನಗರದಿಂದ ಸುಮಾರು 13 ಕಿಲೋ ಮೀಟರ್ ದೂರದಲ್ಲಿರುವ ಪಾರ್ಕ್ 30 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಬಗೆ ಬಗೆಯ ತಳಿಯ ಪ್ರಾಣಿ ಪಕ್ಷಿಗಳು ದೊಡ್ಡ ಸಂಖ್ಯೆಯ ಪ್ರಾಣಿ ಪ್ರಿಯ ಪ್ರವಾಸಿಗರನ್ನು ಸೆಳೆಯುತ್ತವೆ. ಉದ್ಯಾನವನದಲ್ಲಿರುವ ಮಿನಿ ಝೂಗೂ ಪ್ರವಾಸಿಗರು ಭೇಟಿ ನೀಡಬಹುದು. ಇಲ್ಲಿ ಚಿರತೆಗಳು, ಕಪ್ಪು ಕರಡಿ, ಅಂಗೋರಾ ಮೊಲ, ಏಷಿಯಾದ ಸಿಂಹ, ಸಾಂಬಾರ್, ಕೆಂಪು ತೋಳ ಮತ್ತು ಹಲವು ರೀತಿಯ ಜಿಂಕೆಗಳನ್ನು ನೋಡಬಹುದು.


Click it and Unblock the Notifications